ಸುಡುಬಿಸಿಲು.. ದಾಹ ತೀರಿಸಿಕೊಳ್ಳಲು ಬಂದ 5 ಸಿಂಹಗಳು.. - ಊರಿಗೆ ಬಂದ ಸಿಂಹ
ಅಮ್ರೇಲಿ(ಗುಜರಾತ್): ದೇಶಾದ್ಯಂತ ಬಿಸಿಲ ಧಗೆ ಹೆಚ್ಚಿದೆ. ಜನರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಇತ್ತ ಗುಜರಾತ್ನ ಲಿಲಿಯ ಬೃಹದ್ ಗಿರ್ ಅರಣ್ಯ ಪ್ರದೇಶದ ಬಳಿ 5 ಸಿಂಹಗಳು ನೀರನ್ನರಸಿಕೊಂಡು ರಸ್ತೆ ಬಳಿ ಬಂದಿವೆ. ಸುಡು ಬಿಸಿಲಿನ ತಾಪದಲ್ಲಿ ಕ್ರಕಚ್‌ನಲ್ಲಿ 5 ಸಿಂಹಗಳು ಗದ್ದೆಗಳ ಮೂಲಕ ಬಂದು ರಸ್ತೆ ದಾಟುತ್ತಿದ್ದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ತಾಪಮಾನ 45-46 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಜನಸಾಮಾನ್ಯರೂ ಕೂಡ ಕಂಗಾಲಾಗಿದ್ದಾರೆ.
Last Updated : Feb 3, 2023, 8:23 PM IST