ನ್ಯೂಯಾರ್ಕ್‌ನಲ್ಲಿ 41ನೇ 'ಇಂಡಿಯಾ ಡೇ ಪರೇಡ್': ಗೌರವ ಅತಿಥಿಯಾಗಿ ನಟಿಯರಾದ ಸಮಂತಾ, ಜಾಕ್ವೆಲಿನ್ ಭಾಗಿ - ಫೆಡರೇಶನ್ ಆಫ್ ಇಂಡಿಯಾ ಅಸೋಸಿಯೇಷನ್
ನ್ಯೂಯಾರ್ಕ್:ಅಮೆರಿಕದ ನ್ಯೂಯಾರ್ಕ್‌ನಲ್ಲಿ 41ನೇ ವಾರ್ಷಿಕ 'ಇಂಡಿಯಾ ಡೇ ಪರೇಡ್' ನಡೆಯಿತು. ಅಧ್ಯಾತ್ಮಿಕ ಗುರು ರವಿಶಂಕರ್, ನಟಿಯರಾದ ಸಮಂತಾ, ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ ಮತ್ತು ಇತರರು ಪರೇಡ್‌ನಲ್ಲಿ ಭಾಗವಹಿಸಿದ್ದರು.
ಭಾರತದ ಸ್ವಾತಂತ್ರ್ಯ ದಿನಾಚರಣೆ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 20 ರಂದು ನ್ಯೂಯಾರ್ಕ್‌ನಲ್ಲಿ ಫೆಡರೇಶನ್ ಆಫ್ ಇಂಡಿಯಾ ಅಸೋಸಿಯೇಷನ್ 'ಇಂಡಿಯಾ ಡೇ ಪರೇಡ್' ಅನ್ನು ಆಯೋಜಿಸುತ್ತದೆ. ಕಳೆದ ವರ್ಷ ಇಂಡಿಯಾ ಡೇ ಪರೇಡ್‌ನ ವಾರ್ಷಿಕ ಸಮಾರಂಭದಲ್ಲಿ ಅಲ್ಲು ಅರ್ಜುನ್ ಗ್ರ್ಯಾಂಡ್ ಮಾರ್ಷಲ್ ಪ್ರಶಸ್ತಿಯನ್ನು ಪಡೆದಿದ್ದರು. ಈ ವರ್ಷ ಆಧ್ಯಾತ್ಮಿಕ ಗುರು ರವಿಶಂಕರ್ ನೇತೃತ್ವ ವಹಿಸಿದ್ದರು. ಜಾಕ್ವೆಲಿನ್ ಫರ್ನಾಂಡೀಸ್ ಗೌರವ ಅತಿಥಿಯಾಗಿ ಮತ್ತು ಸಮಂತಾ ರುತ್ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದು ಭಾರತಕ್ಕೆ ಮತ್ತು ಭಾರತೀಯ ಚಲನಚಿತ್ರೋದ್ಯಮಕ್ಕೆ ಹೆಮ್ಮೆಯ ಕ್ಷಣವಾಗಿದೆ.
ನ್ಯೂಯಾರ್ಕ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಈ ಮೆರವಣಿಗೆ ನಡೆಸಲಾಯಿತು. "ಮಿಷನ್ ಆಫ್ ಲೈಫ್" ಈ ವರ್ಷದ ಮೆರವಣಿಗೆಯ ಥೀಮ್. ಈ ಪರೇಡ್ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಗೌರವಾರ್ಥವಾಗಿ ಮಾಡುವ ಅತಿರಂಜಿತ ವಾರ್ಷಿಕ ಆಚರಣೆಯಾಗಿದೆ.
ಇದನ್ನೂ ಓದಿ:ಫ್ರಾನ್ಸ್ ರಾಷ್ಟ್ರೀಯ ದಿನದಲ್ಲಿ ಪಾಲ್ಗೊಳ್ಳಲು ಪ್ಯಾರೀಸ್‌ನಲ್ಲಿ ಭಾರತೀಯ ತುಕಡಿಗಳಿಂದ ಅಭ್ಯಾಸ: ವಿಡಿಯೋ