ಚಿಕ್ಕಮಗಳೂರಲ್ಲಿ 340 ಕೆಜಿ ತೂಕದ ಬೃಹತ್ ಮೀನು ನೋಡಲು ಮುಗಿಬಿದ್ದ ಜನ: ವಿಡಿಯೋ
ಚಿಕ್ಕಮಗಳೂರು: ಬರೋಬ್ಬರಿ 340 ಕೆಜಿ ತೂಕದ ಬೃಹತ್ ಮೀನನ್ನು ನೋಡಲು ಜನರು ಮುಗಿಬಿದ್ದಿರುವ ಘಟನೆ ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಇಂದು ನಡೆದಿದೆ. ಇಲ್ಲಿನ ಅಂಗಡಿಯೊಂದರಲ್ಲಿ ಮತ್ಸ್ಯ ಜಾತಿಯಲ್ಲೇ ಅಪರೂಪದ ತಳಿಯಾದ ಅಂಬೂರು ಸಮುದ್ರ ಮೀನನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ಇದೇ ವೇಳೆ ಗ್ರಾಹಕರು ಸರತಿ ಸಾಲಲ್ಲಿ ನಿಂತು ಮೀನನ್ನು ಖರೀದಿಸಿದ್ದಾರೆ.
ವ್ಯಾಪಾರಿಯೊಬ್ಬರು ಇದೇ ಮೊದಲ ಬಾರಿಗೆ 340 ಕೆಜಿ ತೂಕದ ಅಂಬೂರು ಸಮುದ್ರ ಮೀನನ್ನು ಮಂಗಳೂರಿನಿಂದ ತರಿಸಿದ್ದಾರೆ. ಇದಕ್ಕೆ ಪ್ರತಿ ಕೆಜಿ ಮೀನಿಗೆ 600 ರೂಪಾಯಿ ನಿಗದಿಪಡಿಸಿದ್ದರು. ಗ್ರಾಹಕರ ಬೇಡಿಕೆ ಹೆಚ್ಚಾದಂತೆ ಒಂದು ಕೆಜಿಗೆ ಸಾವಿರ ರೂಪಾಯಿ ಮಾಡಿದರೂ ಗ್ರಾಹಕರು ಮೀನನ್ನು ಖರೀದಿಸಿ ಕೊಂಡೊಯ್ದಿದ್ದಾರೆ.
ಈ ವೇಳೆ ಗ್ರಾಹಕರು ಮುಗಿಬಿದ್ದಿದ್ದರಿಂದ ಮೀನು ವ್ಯಾಪಾರಿ ಫುಲ್ ಖುಷಿಯಾಗಿದ್ದರು. ಅಲ್ಲದೆ ಬೃಹತ್ ಮೀನನ್ನು ಕಂಡ ಸಾರ್ವಜನಿಕರು, ತಮ್ಮ ಮೊಬೈಲಿನಲ್ಲಿ ಫೋಟೊವನ್ನು ಸೆರೆ ಹಿಡಿಯುತ್ತಿರುವುದು ಕಂಡು ಬಂತು. ಅಂಬೂರು ಸಮುದ್ರ ಮೀನು ಭಾರತದಿಂದ ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತಾಗುತ್ತದೆ.
ಇದನ್ನೂ ಓದಿ :ಭದ್ರಾ ಹಿನ್ನೀರಲ್ಲಿ 56 ಕೆಜಿ ತೂಕದ ಕ್ಯಾಟ್ಲಾ ಮೀನು ಬಲೆಗೆ; 12 ಸಾವಿರ ರೂಪಾಯಿಗೆ ಸೇಲ್- ವಿಡಿಯೋ