ಕರ್ನಾಟಕ

karnataka

ETV Bharat / videos

ಪಾತ್ರೆಯೊಳಗೆ ಸಿಲುಕಿದ 3 ವರ್ಷದ ಬಾಲಕ : 1 ಗಂಟೆ ಕಾರ್ಯಾಚರಣೆ ಬಳಿಕ ರಕ್ಷಣೆ

By

Published : Jun 3, 2022, 9:19 PM IST

Updated : Feb 3, 2023, 8:23 PM IST

ವಿಲ್ಲುಪುರಂ (ತಮಿಳುನಾಡು): ಹಿತ್ತಾಳೆ ಪಾತ್ರೆಯಲ್ಲಿ ಸಿಲುಕಿದ್ದ 3 ವರ್ಷದ ಬಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ವಿಲ್ಲುಪುರಂನಲ್ಲಿ ಮನೆಯೊಳಗೆ ಆಟ ಆಡುತ್ತಿದ್ದಾಗ ಮಗು ಖಾಲಿ ಹಿತ್ತಾಳೆಯ ಪಾತ್ರೆಯ ಒಳಗೆ ನುಸುಳಿದೆ. ತಲೆ ಮತ್ತು ಕೈಗಳನ್ನು ಹೊರತುಪಡಿಸಿ ಇಡೀ ದೇಹವು ಪಾತ್ರೆಯಲ್ಲಿ ಸಿಲುಕಿಕೊಂಡಿದೆ. ಮನೆಯಲ್ಲಿ ಆ ಮಗುವನ್ನು ಪಾತ್ರೆಯಿಂದ ಹೊರತೆಗೆಯುವ ಪ್ರಯತ್ನ ವಿಫಲವಾದ ನಂತರ, ಮಗುವನ್ನು ತಿರುವೆನ್ನೈ ನಲ್ಲೂರಿನ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆದೊಯ್ದಿದ್ದರು. 1 ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಣೆ ಮಾಡಲಾಗಿದೆ.
Last Updated : Feb 3, 2023, 8:23 PM IST

ABOUT THE AUTHOR

...view details