ಪ್ರೇಮಿಗಳ ದಿನಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 17.4 ಮಿಲಿಯನ್ ಗುಲಾಬಿ ರಫ್ತು - valentines day special
ದೇವನಹಳ್ಳಿ: ಪೆರಿಷಬಲ್ ಸರಕು ಸಾಗಣೆಯಲ್ಲಿ ಮೊದಲ ಸ್ಥಾನ ಪಡೆದಿರುವ ಬಿಎಲ್‌ಆರ್ ಏರ್‌ಪೋರ್ಟ್ ಕಾರ್ಗೋ ಈ ವರ್ಷದ ಪ್ರೇಮಿಗಳ ದಿನದ ಪೂರ್ವದಲ್ಲಿ ಗುಲಾಬಿ ಸಾಗಣೆಯಲ್ಲಿ ಎರಡು ಪಟ್ಟು ಹೆಚ್ಚಳ ಸಾಗಣೆ ಮಾಡಿದೆ. ಗುಲಾಬಿಗಳ ಋತುವಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಗುಲಾಬಿ ಸಾಗಣೆಯಲ್ಲಿ ಶೇ.14ರಷ್ಟು ಹೆಚ್ಚಳ ಕಂಡು ಬಂದಿದೆ.
ಈ ಬಾರಿ 17.4 ಮಿಲಿಯನ್ ಗುಲಾಬಿಗಳನ್ನು (589,296 ಕೆಜಿ) ಕೌಲಾಲಂಪುರ್, ಸಿಂಗಾಪುರ್, ಕುವೈತ್, ಮನಿಲಾ, ಆಕ್ಲೆಂಡ್, ನ್ಯೂಯಾರ್ಕ್, ಲೆಬನಾನ್, ಮಾಲ್ಡೀವ್ಸ್, ಜೋರ್ಡಾನ್ ಮತ್ತು ದುಬೈ ಈ ದೇಶಗಳಿಗೆ ಪ್ರಮುಖವಾಗಿ ರಫ್ತು ಮಾಡಲಾಯಿತು. ಬಿಎಲ್‌ಆರ್ ಕಾರ್ಗೋ ಒಟ್ಟು 15 ಜಾಗತಿಕ ತಾಣಗಳಿಗೆ ಗುಲಾಬಿಗಳನ್ನು ಕಳುಹಿಸಿದ್ದು, ದೇಶಿಯ ವಿಭಾಗದಲ್ಲಿ ಒಟ್ಟು 6.6 ಮಿಲಿಯನ್ ಗುಲಾಬಿಗಳನ್ನು (178,200 ಕೆಜಿ) ಸಂಸ್ಕರಿಸಲಾಗಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.31ರಷ್ಟು ಹೆಚ್ಚಳವಾಗಿದೆ.
ದೆಹಲಿ, ಕೋಲ್ಕತ್ತಾ, ಮುಂಬೈ, ಗುವಾಹಟಿ, ಬಾಗ್ಡೋಗ್ರಾ, ಅಹಮದಾಬಾದ್, ಕೊಚ್ಚಿ, ದರ್ಭಾಂಗ, ಚಂಡೀಗಢ ಮತ್ತು ಪಾಟ್ನಾ ಸೇರಿದಂತೆ 34 ದೇಶೀಯ ಸ್ಥಳಗಳಲ್ಲಿ ವ್ಯಾಲೆಂಟೈನ್ಸ್ ವಾರದ ಅಂಗವಾಗಿ ರವಾನಿಸಲಾಗಿದೆ.
ಇದನ್ನೂ ಓದಿ:ವರನ ಸ್ವಾಗತಿಸಲು ನಿಂತಿದ್ದ ವಧುವಿನ ಕುಟುಂಬದ ಮೇಲೆ ಹರಿದ ವಾಹನ: ಮೂವರ ಸಾವು