ಕರ್ನಾಟಕ

karnataka

ಬೆಂಗಳೂರು ಕಂಬಳಕ್ಕೆ ಹೊರಟ ಜೋಡಿ ಕೋಣಗಳು

ETV Bharat / videos

ಬೆಂಗಳೂರು ಕಂಬಳ: ಉಪ್ಪಿನಂಗಡಿಯಿಂದ ಹೊರಟ ಸುಮಾರು 150 ಜೋಡಿ ಕೋಣಗಳು-ವಿಡಿಯೋ - ಕೋಣಗಳ ಮೆರವಣಿಗೆ

By ETV Bharat Karnataka Team

Published : Nov 23, 2023, 12:47 PM IST

ಉಪ್ಪಿನಂಗಡಿ:ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ನವೆಂಬರ್ 25 ಮತ್ತು 26ರಂದು ನಡೆಯಲಿರುವ ಕಂಬಳ ಕ್ರೀಡೆಗಾಗಿ ಕೋಣಗಳನ್ನು ಅದ್ಧೂರಿ ಮೆರವಣಿಗೆಯ ಮೂಲಕ ಕರೆದೊಯ್ಯುವ ಕಾರ್ಯಕ್ರಮ ಉಪ್ಪಿನಂಗಡಿಯಿಂದ ಇಂದು ಆರಂಭಗೊಂಡಿತು.

ಬೆಳಿಗ್ಗೆ 9.30ಕ್ಕೆ ಉಪ್ಪಿನಂಗಡಿಯ ಜೂನಿಯ‌ರ್ ಕಾಲೇಜು ಮೈದಾನದಿಂದ ನಿರ್ಗಮನ ಕಾರ್ಯಕ್ರಮ ನಡೆಯಿತು. ಸುಮಾರು 150 ಜೋಡಿ ಕೋಣಗಳನ್ನು ಕರಾವಳಿಯ ನಾನಾ ಭಾಗಗಳಿಂದ ಉಪ್ಪಿನಂಗಡಿಗೆ ಕರೆತಂದು ಇಲ್ಲಿಂದ ಲಾರಿಗಳಲ್ಲಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು. ಪ್ರತಿ ಜೋಡಿ ಕೋಣಕ್ಕೆ ಒಂದು ಲಾರಿಯನ್ನು ನಿಗದಿ ಮಾಡಲಾಗಿದೆ. ಕೋಣಗಳು ನಿರ್ಗಮಿಸುವ ಸಂದರ್ಭದಲ್ಲಿ ಮಂಗಳವಾದ್ಯ, ಕಹಳೆಗಳ ಅಬ್ಬರದೊಂದಿಗೆ ಭವ್ಯವಾಗಿ ಬೀಳ್ಕೊಡಲಾಯಿತು. 

ಕೋಣಗಳಿಗೆ ಬೇಕಾದ ನೀರು, ಆಹಾರವನ್ನು ಆಯಾ ಲಾರಿಗಳಲ್ಲೇ ಒಯ್ಯಲಾಗುತ್ತಿದೆ. ಪ್ರತಿ ಕೋಣಗಳ ಓಟಗಾರರು, ಪರಿಚಾರಕರ ತಂಡಗಳು ಕೂಡ ಜತೆಯಲ್ಲೇ ಸಾಗಲಿದೆ. ಜೊತೆಗೆ, ಪಶು ವೈದ್ಯಕೀಯ ತಜ್ಞರು, ನೀರಿನ ಟ್ಯಾಂಕರ್‌ಗಳು ಸೇರಿದಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ನೆಲ್ಯಾಡಿ, ಗುಂಡ್ಯ, ಸಕಲೇಶಪುರ ಮೂಲಕ ಸಾಗುವ ಕೋಣಗಳಿಗೆ ಹಾಸನದಲ್ಲಿ ವಿಶ್ರಾಂತಿ ನೀಡಲಾಗುತ್ತದೆ. ಅಲ್ಲಿಂದ ಮತ್ತೆ ಪ್ರಯಾಣವನ್ನು ಮುಂದುವರೆಸಲಾಗುತ್ತದೆ.

ಬೆಂಗಳೂರಿನ ಅರಮನೆ ಮೈದಾನಕ್ಕೆ ತಲುಪಿದ ಬಳಿಕ ದಿನಾಂಕ 24ರಂದು ಪೂರ್ತಿ ದಿನ ಕೋಣಗಳಿಗೆ ವಿಶ್ರಾಂತಿ ನೀಡಲಾಗುತ್ತದೆ. ನಂತರದಲ್ಲಿ 25ರಂದು ಅವುಗಳನ್ನು ಕಂಬಳ ಕೆರೆಗೆ ಇಳಿಸಲಾಗುತ್ತದೆ. ಕೋಣಗಳನ್ನು ಸರತಿ ಸಾಲಿನಲ್ಲಿ ಮೆರವಣಿಗೆ ರೂಪದಲ್ಲಿ ಕೊಂಡೊಯ್ಯುವ ಮೂಲಕ ಇದನ್ನೊಂದು ಐತಿಹಾಸಿಕ ಕ್ಷಣವಾಗಿ ರೂಪಿಸುವುದು ಕಂಬಳ ಸಮಿತಿಯ ತೀರ್ಮಾನವಾದರೂ, ಘಾಟಿ ಪ್ರದೇಶವಾಗಿರುವ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಎದುರಾಗಿದೆ. ಆದರೂ ಉಪ್ಪಿನಂಗಡಿ ಮತ್ತು ಪುತ್ತೂರು ಸಂಚಾರಿ ಪೊಲೀಸರು ಹಾಗೂ ಆಯಾ ಪ್ರದೇಶಗಳ ಪೊಲೀಸರು ಸಂಪೂರ್ಣ ವ್ಯವಸ್ಥೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಕಂಬಳ: ನಾಳೆ ಮೆರವಣಿಗೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೋಣಗಳ ನಿರ್ಗಮನ

ABOUT THE AUTHOR

...view details