ಕರ್ನಾಟಕ

karnataka

ETV Bharat / videos

ಆಂಬ್ಯುಲೆನ್ಸ್​ ಚಾಲಕನ ಸಮಯಪ್ರಜ್ಞೆ.. ತುಂಬಿ ಹರಿಯುವ ಹಳ್ಳ ದಾಟಿ ಗರ್ಭಿಣಿಯನ್ನು ರಕ್ಷಿಸಿದ 108 ಸಿಬ್ಬಂದಿ - ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿ

By

Published : Sep 8, 2022, 1:30 PM IST

Updated : Feb 3, 2023, 8:27 PM IST

ರಾಯಚೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅದರಂತೆ ಮಸ್ಕಿ ತಾಲೂಕಿನ ವೆಂಕಟಾಪುರ ಬಳಿಯ ಹಳ್ಳವೂ ಸಹ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದೆ. ವೆಂಕಟಾಪುರ ಗ್ರಾಮದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆ ಮಹಿಳೆಯನ್ನು ಸಿಂಧನೂರು ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಈ ವೇಳೆ ವೆಂಕಟಾಪೂರ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಆದ್ರೆ​ ಡ್ರೈವರ್​ ಎದೆಗುಂದದೆ ಎಚ್ಚರ ಹಾಗೂ ಸಮಯ ಪ್ರಜ್ಞೆಯಿಂದ ಧೈರ್ಯ ತೋರಿ ಹಳ್ಳದಲ್ಲೇ ಆಂಬ್ಯುಲೆನ್ಸ್​ನ್ನು ಚಲಾಯಿಸಿ ಪಾರು ಮಾಡಿದ್ದಾರೆ. ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿಯನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಲ್ಪ ತಡವಾಗಿದ್ರೂ ಗರ್ಭಿಣಿಗೆ ತೊಂದರೆ ಸಾಧ್ಯತೆ ಹೆಚ್ಚಾಗುತ್ತಿತ್ತು ಎನ್ನಲಾಗುತ್ತಿದೆ. ಚಾಲಕ ಮಲ್ಲಿಕಾರ್ಜುನ ಹಾಗೂ ಶುಶ್ರೂಷಕ ಬಸವಲಿಂಗ ಅವರ ಸಾಹಸಕ್ಕೆ ಸಾರ್ವನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಆಂಬ್ಯುಲೆನ್ಸ್​ ಚಾಲಕನ ಸಮಯ ಪ್ರಜ್ಞೆಯಿಂದ ಗರ್ಭಿಣಿ ಮತ್ತು ಅವರ ಹೊಟ್ಟೆಯಲ್ಲಿರುವ ಶಿಶು ಬದುಕುಳಿದಿಳಿದಿದ್ದಾರೆ.
Last Updated : Feb 3, 2023, 8:27 PM IST

ABOUT THE AUTHOR

...view details