Watch... ಇಂದಿನಿಂದ 7 ದಿನಗಳ ಕಾಲ ಸಂತ ಏಕನಾಥ ಮಹಾರಾಜರ ಜಯಂತಿ
ಅಮರಾವತಿ ( ಮಹಾರಾಷ್ಟ್ರ):ಜಿಲ್ಲೆಯ ಚಂದೂರ್ ತಾಲೂಕಿನ ಆಮ್ಲ ವಿಶ್ವೇಶ್ವರ್ ಎಂಬ ಗ್ರಾಮದಲ್ಲಿ ಸತತ 70 ವರ್ಷಗಳಿಂದ ಸಂತ ಏಕನಾಥ ಮಹಾರಾಜರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡ ಬರಲಾಗುತ್ತಿದೆ. 7 ದಿನಗಳ ಕಾಲ ನಡೆಯುವ ಈ ಜಯಂತಿಯಲ್ಲಿ ಸುತ್ತಲು ಹಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು ಇಲ್ಲಿಗೆ ಆಗಮಿಸಿ ಜಯಂತಿಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲದೇ ಇಲ್ಲಿಯ ವಿಶೇಷತೆ ಎಂದರೆ, 7 ದಿನಗಳ ಕಾಲ ನಡೆಯುವ ಈ ಜಯಂತಿಯಲ್ಲಿ ಬರುವಂತಹ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ.
ಪ್ರತಿದಿನ ಸುಮಾರು 100 ಕ್ವಿಂಟಾಲ್ ತರಕಾರಿ, 30ಕ್ವಿಂಟಾಲ್ ಹಿಟ್ಟು, 20ಕ್ವಿಂಟಾಲ್ ಅಕ್ಕಿ ಅನ್ನಪ್ರಸಾದಕ್ಕೆ ಬೇಕಾಗುತ್ತದೆ. ಇದೆಲವನ್ನು ಭಕ್ತರೇ ನೀಡುತ್ತಾರೆ. ಇನ್ನು ಪ್ರತಿ ದಿನ ಸಾವಿರಾರು ಜನ ಬರು ಹಿನ್ನೆಲೆ ಬೆಳಗಿನ ಜಾವ 4 ರಿಂದಲೇ ಅಡುಗೆಯನ್ನು ಪ್ರಾರಂಭಿಸುತ್ತಾರೆ. ಸುತ್ತ ಗ್ರಾಮದ ರೈತರು ತಮ್ಮ ಹೊಲದಲ್ಲಿ ಬೆಳೆಸಿರುವ ಬೆಳಗಳನ್ನು ನೇರವಾಗಿ ಇಲ್ಲಿಗೆ ತಂದು ಅರ್ಪಣೆ ಮಾಡುತ್ತಾರೆ.
ಇದನ್ನೂ ಓದಿ:ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾದ ಜೋಳದ ತೆನೆ ರಾಶಿ.. ಮನಕಲಕುವಂತಿದೆ ರೈತನ ಆಕ್ರಂದನ