ಚಲಿಸುತ್ತಲೇ ಸ್ವಯಂಚಾಲಿತ ಚಾರ್ಜ್.. ಸೋಲಾರ್ ಬೈಕ್ ಅಭಿವೃದ್ಧಿಪಡಿಸಿದ MSc ವಿದ್ಯಾರ್ಥಿ!
ಮಧುರೈ(ತಮಿಳುನಾಡು): ಮಧುರೈನಲ್ಲಿ MSc ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿಯೋರ್ವ ಸೋಲಾರ್ ಬೈಕ್ ಅಭಿವೃದ್ಧಿಪಡಿಸಿದ್ದಾನೆ. ಚಲಿಸುವ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಬ್ಯಾಟರಿ ಚಾರ್ಜ್ ಆಗುವ ಸಾಮರ್ಥ್ಯವನ್ನ ಈ ಬೈಕ್ ಹೊಂದಿದೆ. ಈತನ ಸಹೋದರಿಗೆ ತಮಿಳುನಾಡು ಸರ್ಕಾರ ನೀಡಿದ್ದ ಸೈಕಲ್ನ್ನ ಇ-ಬೈಕ್ ಆಗಿ ಪರಿವರ್ತಿಸಿರುವ ಧನುಷ್ ಕುಮಾರ್, ಸುಮಾರು 40 ಕಿಲೋ ಮೀಟರ್ವರೆಗೆ ಇದರ ಮೇಲೆ ಪ್ರಯಾಣಿಸಬಹುದಾಗಿದೆ ಎಂದು ಹೇಳಿದ್ದಾನೆ. 20 ಕಿಲೋ ಮೀಟರ್ ಚಲಿಸುವಷ್ಟರಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆಯಂತೆ.
Last Updated : Feb 3, 2023, 8:20 PM IST