![ETV Thumbnail video thumbnail](https://etvbharatimages.akamaized.net/etvbharat/prod-images/320-214-14955252-thumbnail-3x2-wdfdfd.jpg)
ಸಂಸತ್ ಬಜೆಟ್ ಅಧಿವೇಶನ ಮುಕ್ತಾಯ: ಪ್ರತಿಪಕ್ಷ ನಾಯಕರ ಭೇಟಿಯಾದ ಪ್ರಧಾನಿ, ಸ್ಪೀಕರ್ - ಪ್ರಧಾನಿ ಮೋದಿ ಭೇಟಿಯಾದ ಸೋನಿಯಾ
ಸಂಸತ್ತಿನ ಬಜೆಟ್ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿದರು. ಈ ವೇಳೆ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ತಿಳಿದು ಬಂದಿದೆ. ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭಗೊಂಡು ಮೊದಲಾರ್ಧ ಫೆ. 11ರಂದು ಮುಕ್ತಾಯಗೊಂಡಿತ್ತು. ಇದಾದ ಬಳಿಕ ದ್ವಿತೀಯಾರ್ಧ ಮಾರ್ಚ್ 14ರಂದು ಪ್ರಾರಂಭವಾಗಿ ಏಪ್ರಿಲ್ 7ರಂದು ಮುಕ್ತಾಯಗೊಂಡಿದೆ.
Last Updated : Feb 3, 2023, 8:22 PM IST