ಶಿವಲಿಂಗೇಗೌಡರ ಆರ್ಭಟಕ್ಕೆ ಸ್ಟೇಜ್ ಗಢಗಢ.. ಗದೆ ಹಿಡಿದು ಭೀಮನ ಅವತಾರ ತಾಳಿದ ಶಾಸಕರು.. - ಕೈಯಲ್ಲಿ ಗದೆ ಹಿಡಿದು ಭೀಮನ ಡೈಲಾಗ್ ಹೊಡೆದ ಶಾಸಕ ಶಿವಲಿಂಗೇಗೌಡರು
ಹಾಸನ : ಅರಸೀಕೆರೆ ತಾಲೂಕಿನ ಪಡುವನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಅಕ್ಷರಶಃ ಭೀಮನ ಅವತಾರ ತಾಳಿದ್ದರು. ಸ್ಟೇಜ್ ಮೇಲೆ ಗದೆ ಹಿಡಿದು ನಿಂತು ಅವರು ಹೇಳಿದ ಕುರುಕ್ಷೇತ್ರ ನಾಟಕದ ಸಂಭಾಷಣೆಗೆ ಪ್ರೇಕ್ಷಕರು ಶಿಳ್ಳೇ, ಚಪ್ಪಾಳೆ, ಕೇಕೆ ಹಾಕಿ ಖುಷಿಪಟ್ಟರು. ಕುರುಕ್ಷೇತ್ರ ನಾಟಕ ಉದ್ಘಾಟಿಸಿದ ಬಳಿಕ ಶಾಸಕರು ಭೀಮನ ಪಾತ್ರದ ಡೈಲಾಗ್ ಹೊಡೆದು ರಂಜಿಸಿದರು.
Last Updated : Feb 3, 2023, 8:19 PM IST