ಯುವಕರ ಜೊತೆ ಕ್ರಿಕೆಟ್ ಆಡಿ, ಯೋಗ ಮಾಡಿ ಗಮನ ಸೆಳೆದ ಆರೋಗ್ಯ ಸಚಿವ ಸುಧಾಕರ್ - ಚಿಕ್ಕಬಳ್ಳಾಪುರಕ್ಕೆ ಸಚಿವ ಸುಧಾಕರ್ ಭೇಟಿ
ಚಿಕ್ಕಬಳ್ಳಾಪುರ : ತಾಲೂಕಿನ ಹೊಸಹುಡ್ಯ ಗ್ರಾಪಂನಲ್ಲಿ ನಡೆದ ಡಿಸಿ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಆಗಮಿಸಿದ್ದರು. ಈ ವೇಳೆ ಸ್ಥಳೀಯ ಯುವಕರೊಂದಿಗೆ ಸಚಿವರು ಕ್ರಿಕೆಟ್ ಆಟವಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಬೌಲಿಂಗ್ ಮಾಡಿ ಗಮನ ಸೆಳೆದರು. ಬಳಿಕ ಸಚಿವ ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠ ಜಿ ಕೆ ಮಿಥುನ್ ಕುಮಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಮುಂಜಾನೆಯ ಯೋಗಾಭ್ಯಾಸ ಮಾಡಿ ಸಾರ್ವಜನಿಕರಿಗೆ ಆರೋಗ್ಯದ ಮಹತ್ವ ಹಾಗೂ ಜಾಗೃತಿ ಮೂಡಿಸಿದರು.
Last Updated : Feb 3, 2023, 8:17 PM IST