ಕರ್ನಾಟಕ

karnataka

ETV Bharat / videos

ಹಿಜಾಬ್​ ವಿವಾದವನ್ನ ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ತಿದೆ: ಸಚಿವ ಬಿಸಿ ಪಾಟೀಲ್ - ಸಚಿವ ಬಿಸಿ ಪಾಟೀಲ್​ ಹಿಜಾಬ್ ವಿವಾದ

By

Published : Feb 12, 2022, 12:55 AM IST

Updated : Feb 3, 2023, 8:11 PM IST

ಚಿತ್ರದುರ್ಗ: ಹಿಜಾಬ್ ವಿವಾದ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್, ಜೆಡಿಎಸ್ ಮುಖಂಡರ ಆರೋಪಕ್ಕೆ ಚಿತ್ರದುರ್ಗದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ. ಹಿಜಾಬ್ ವಿವಾದ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿಲ್ಲ.ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಶಾಲೆಗೆ ತೆರಳಲು ಸರ್ಕಾರ ಸೂಚಿಸಿದೆ. ಈಗಾಗಲೇ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಅದರಿಂದಾಗಿ ಕೋರ್ಟ್ ಸೂಚನೆಯನ್ನು ನಾವು ಪಾಲಿಸುತ್ತೇವೆ. ಆದರೆ,ಹಿಜಾಬ್ ವಿವಾದವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಈ ವಿವಾದ ಎತ್ತಿಕಟ್ಟಿ ಪ್ರಚೋದನೆ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್​ ದೆಹಲಿ ಪ್ರವಾಸ ವಿಚಾರವಾಗಿ ಮಾತನಾಡಿರುವ ಅವರು, ನಾಯಕರು ದೆಹಲಿಗೆ ಹೋಗುವುದು ಕಾಮನ್​. ಸಿಎಂ ಬದಲಾವಣೆ ಎಂಬುದು ಸರಿಯಲ್ಲ. ಹೆಚ್.ಡಿ.ರೇವಣ್ಣ ಹಾಗೂ ಕಾಂಗ್ರೆಸ್ಸಿಗರು ನಮ್ಮನ್ನು ಎಂದು ಹೊಗಳುವುದಿಲ್ಲ. ಟೀಕೆ ಮಾಡುವವರು ಇದ್ದೆ ಇರುತ್ತಾರೆ. ನಮ್ಮ ಸಿಎಂ ಸಮರ್ಥವಾಗಿದ್ದು, ಉತ್ತಮ ಆಡಳಿತ ನೀಡ್ತಿದ್ದಾರೆ ಎಂದರು.
Last Updated : Feb 3, 2023, 8:11 PM IST

ABOUT THE AUTHOR

...view details