ಕರ್ನಾಟಕ

karnataka

ETV Bharat / videos

ಮಂಗಳೂರು: ಅಪಘಾತದಿಂದ ಹೊತ್ತಿ ಉರಿದ ಬಸ್-ಬೈಕ್, ಸಿಸಿಟಿವಿ ವಿಡಿಯೋ - mangaluru accident cctv video

By

Published : Apr 8, 2022, 8:02 PM IST

Updated : Feb 3, 2023, 8:22 PM IST

ಮಂಗಳೂರು: ನಗರದ ಹಂಪನಕಟ್ಟೆ ಟ್ರಾಫಿಕ್ ಸಿಗ್ನಲ್ ಬಳಿ ಸಂಭವಿಸಿದ ಬಸ್ ಮತ್ತು ಬೈಕ್ ನಡುವಿನ ಅಪಘಾತದ ಕೆಲ ಸೆಕೆಂಡುಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಬೆಂಕಿ ಹೊತ್ತಿದ ಪರಿಣಾಮ ಬೈಕ್​ ಹಾಗೂ ಬಸ್​ ಸುಟ್ಟು ಕರಕಲಾಗಿವೆ. ಬಸ್​​ನ ಚಕ್ರದಡಿಗೆ ಬೈಕ್ ಬಿದ್ದಿದ್ದು, ಬೈಕ್​ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬಸ್​​ನ ಡೀಸೆಲ್ ಟ್ಯಾಂಕ್​ಗೆ ಕೂಡ ಬೆಂಕಿ ಆವರಿಸಿಕೊಂಡು ಬಸ್ ಕೂಡ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಬೈಕ್​ ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​​ನಲ್ಲಿದ್ದವರು ಕೂಡಲೇ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದರು.
Last Updated : Feb 3, 2023, 8:22 PM IST

ABOUT THE AUTHOR

...view details