ಮಾರಕಾಸ್ತ್ರ ತೋರಿಸಿ ಫುಡ್ ಡಿಲೆವರಿ ಬಾಯ್ ಬೈಕ್ ಎಗರಿಸಿದ ಪುಡಿರೌಡಿಗಳು - ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಘಟನೆ
ಬೆಂಗಳೂರು: ಇಲ್ಲಿನ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಡಿಲೆವರಿ ಬಾಯ್ ಬೈಕ್ ದೋಚಲು ಬಂದ ಇಬ್ಬರು ಪುಡಿರೌಡಿಗಳು ಮಾರಕಾಸ್ತ್ರ ತೋರಿಸಿ ಹೆದರಿಸಿದ್ದಾರೆ. ಡಿಲೆವರಿ ಹುಡುಗ ಕಾಲಿಗೆ ಬಿದ್ದು ಬಿಟ್ಟುಬಿಡಿ ಅಂದರೂ ಸಹ ಕೇಳದೆ ಆತನ ಬೈಕ್ ಎಗರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪುಂಡರ ಅಟ್ಟಹಾಸಕ್ಕೆ ಬೆದರಿದ ಅಕ್ಕಪಕ್ಕದ ಜನ ಮೂಕ ಪ್ರೇಕ್ಷಕರಂತೆ ವಿಡಿಯೋ ಚಿತ್ರೀಕರಿಸುವುದಕ್ಕೆ ಸೀಮಿತವಾಗಿದ್ದರು. ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಡಿ.ಜೆ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Last Updated : Feb 3, 2023, 8:17 PM IST