ನಂಜನಗೂಡಿನಲ್ಲಿ ಸಂಭ್ರಮದಿಂದ ಜರುಗಿದ ತೆಪ್ಪೋತ್ಸವ: ಸಾವಿರಾರು ಭಕ್ತರು ಭಾಗಿ - Lakhs Of Devotees Witness Pancha Maharathotsava teppotsavam At Nanjangud
ಮೈಸೂರು: ಗೌತಮ ಪಂಚ ಮಹಾರಥೋತ್ಸವದ ತೆಪ್ಪೋತ್ಸವವು ಶುಕ್ರವಾರ ರಾತ್ರಿ ಕಪಿಲಾ ನದಿಯಲ್ಲಿ ಅದ್ಧೂರಿಯಾಗಿ ನಡೆಯಿತು. ನಂಜುಂಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಾನಗಳು ನಡೆದವು. ದೇವಸ್ಥಾನದಿಂದ ಉತ್ಸವಮೂರ್ತಿಯನ್ನ ಮಂಗಳವಾದ್ಯಗಳೊಂದಿಗೆ ಕಪಿಲಾ ನದಿಗೆ ಕರೆ ತರಲಾಯಿತು. ವಿದ್ಯುತ್ ದೀಪಾಲಂಕಾರ ಹಾಗೂ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಉತ್ಸವಮೂರ್ತಿಯನ್ನ ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ಜೈಕಾರದೊಂದಿಗೆ ಒಂದು ಸುತ್ತು ಸುತ್ತಿಸಲಾಯಿತು. ನಂತರ ಕಪಿಲಾ ಸ್ನಾನಘಟ್ಟದಿಂದ ಉತ್ಸವಮೂರ್ತಿಯನ್ನು ವಾಪಸ್ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು. ತೆಪ್ಪೋತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ನದಿಯ ಸುತ್ತಮುತ್ತ ನೆರೆದಿದ್ದರು. ಮಾ.20 ರಂದು ನಂದಿ ವಾಹನೋತ್ಸವದೊಂದಿಗೆ ಗೌತಮ ಪಂಚ ರಥೋತ್ಸವ ಸಂಪನ್ನಗೊಳ್ಳಲಿದೆ.
Last Updated : Feb 3, 2023, 8:20 PM IST