ವೀಕ್ಷಿಸಿ: ಸೋಮೇನಹಳ್ಳಿಯಲ್ಲಿ ವೈಭವದ ಗಂಗಾಭವಾನಿ ಹೂವಿನ ಕರಗ - ಚಿಕ್ಕಬಳ್ಳಾಪುರ ಕರಗ ಉತ್ಸವ
ಗುಡಿಬಂಡೆ (ಚಿಕ್ಕಬಳ್ಳಾಪುರ): ಸೋಮೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಗ್ರಾಮದೇವತೆ ಶ್ರೀ ಗಂಗಾಭವಾನಿಯ ಹೂವಿನ ಕರಗ ಅದ್ಧೂರಿಯಿಂದ ನೆರವೇರಿತು. ರಾತ್ರಿ 11 ಗಂಟೆಗೆ ಗಂಗಾಭವಾನಿ ದೇವಾಲಯವನ್ನು ಬಿಟ್ಟ ಕರಗ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಮತ್ತೆ ದೇಗುಲವನ್ನು ಮರುದಿನ ಬೆಳಿಗ್ಗೆ 9.30ಕ್ಕೆ ಸೇರಿತು. ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಕರಗ ಮತ್ತು ಪೌರಾಣಿಕ ನಾಟಕ ವೀಕ್ಷಿಸಿ ಖುಷಿಪಟ್ಟರು. ಸೋಮೇನಹಳ್ಳಿ ಗ್ರಾಮದಲ್ಲಿ ಕಳೆದ 39 ವರ್ಷಗಳಿಂದ ಕರಗ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ.
Last Updated : Feb 3, 2023, 8:22 PM IST