ಹಾಸನದಲ್ಲಿ ಯುವಕ-ಯುವತಿಗೆ ಹಿಗ್ಗಾಮುಗ್ಗಾ ಥಳಿತ... ವಿಡಿಯೋ ವೈರಲ್ - ಹಾಸನದಲ್ಲಿ ಯುವಕನಿಗೆ ಥಳಿತ
ಹಾಸನ: ಪ್ರೀತಿಸುತ್ತಿದ್ದಾರೆ ಎಂದು ಅನ್ಯಕೋಮಿನ ಯುವಕ, ಯುವತಿಗೆ ಯುವಕರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.