ಅಮೆರಿಕದಲ್ಲಿ ಭಾರತದ 'ಸ್ವದೇಶ್'ಮಂತ್ರ: 'ಏ ಜೋ ದೇಶ್ ಹೈ ತೇರಾ' ಗೀತೆ ಹಾಡಿದ US ನೇವಿ ಅಧಿಕಾರಿಗಳು - ವಿಡಿಯೋ - ಭಾರತ- ಅಮೆರಿಕ ಸಂಬಂಧ
ವಾಷಿಂಗ್ಟನ್: ಅಮೆರಿಕ ನೌಕಾಪಡೆಯ ಮುಖ್ಯಸ್ಥರು (ಸಿಎನ್‌ಒ) ಮೈಕೆಲ್ ಎಂ ಗಿಲ್ಡೆ ಮತ್ತು ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರ ನಡುವಿನ ಭೋಜನ ಕೂಟದಲ್ಲಿ ಯುಎಸ್ ನೌಕಾಪಡೆಯ ಸದಸ್ಯರು ಜನಪ್ರಿಯ ಹಿಂದಿ ಹಾಡು ಹಾಡಿದ್ದಾರೆ. ಸಂಧು ಅವರು, ಯುಎಸ್ ನೇವಿ ಅಧಿಕಾರಿಗಳು 'ಸ್ವದೇಶ್' ಚಿತ್ರದ ದೇಶಿ ಸಂಬಂಧದ ಸಂದೇಶ ಸಾರುವ ಜನಪ್ರಿಯ 'ಏ ಜೋ ದೇಶ್ ಹೈ ತೇರಾ' ಹಾಡು ಹಾಡುವ ವಿಡಿಯೋ ಹಂಚಿಕೊಂಡಿದ್ದಾರೆ. "ಇದು ಸ್ನೇಹದ ಬಂಧವಾಗಿದ್ದು, ಅದನ್ನು ಎಂದಿಗೂ ಮುರೆಯಲಾಗುವುದಿಲ್ಲ'' ಎಂದೂ ಬರೆದುಕೊಂಡಿದ್ದಾರೆ.