60 ಉಪಗ್ರಹಗಳನ್ನು ಹೊತ್ತು ನಭಕ್ಕೆ ಜಿಗಿದ ಫಾಲ್ಕನ್ ರಾಕೆಟ್! - ಸ್ಟಾರ್‌ಲಿಂಕ್ ಉಪಗ್ರಹ
ಫ್ಲೋರಿಡಾ: ಸ್ಪೇಸ್‌ಎಕ್ಸ್ ತನ್ನ ನಾಲ್ಕನೇ ಸರಣಿಯ ಹೊಸದಾದ 60 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಬುಧವಾರ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಫ್ಲೋರಿಡಾದ ಕೇಪ್ ಕೆನವೆರಲ್ ವಾಯುಪಡೆ ನಿಲ್ದಾಣದಿಂದ 'ಫಾಲ್ಕನ್ 9 ರಾಕೆಟ್' ಉಪಗ್ರಹಗಳನ್ನು ಹೊತ್ತು ನಭಕ್ಕೆ ಜಿಗಿಯಿತು. ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಸಾಮರ್ಥ್ಯವಿರುವ 12,000 ಶಕ್ತಿಯುತ ಉಪಗ್ರಹ ಜಾಲವನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ.