ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಹಾಂಕಾಂಗ್ ಡಿಸ್ನಿಲ್ಯಾಂಡ್ ಪುನಾರಂಭ - ಹಾಂಕಾಂಗ್
ಕೊರೊನಾ ವೈರಸ್ ಭೀತಿಯಿಂದ ಸ್ಥಗಿತವಾಗಿದ್ದ ಥೀಮ್ ಪಾರ್ಕ್ ಡಿಸ್ನಿಲ್ಯಾಂಡ್ ಸುಮಾರು 5 ತಿಂಗಳ ಬಳಿಕ ಗ್ರಾಹಕರಿಗೆ ಮುಕ್ತವಾಗಿದೆ. ಗ್ರಾಹಕರ ಸಂಖ್ಯೆಯಲ್ಲಿ ಕಡಿತ, ಸಾಮಾಜಿಕ ಅಂತರ ಸೇರಿದಂತೆ ಹಲವು ಮಾರ್ಗ ಸೂಚಿಗಳನ್ನು ಪಾಲಿಸಲಾಗುತ್ತಿದೆ. ಕೋವಿಡ್19 ಹರಡುತ್ತಿದ್ದ ಪರಿಣಾಮ ಜನವರಿ ಅಂತ್ಯದಲ್ಲಿ ತಾತ್ಕಾಲಿಕವಾಗಿ ಈ ಥೀಮ್ ಪಾರ್ಕ್ ಅನ್ನು ಸ್ಥಗಿತಗೊಳಿಸಲಾಗಿತ್ತು. ವಿಶ್ವಾದ್ಯಂತ ಇರುವ ತನ್ನ ಘಟಕಗಳ ಪೈಕಿ ಮತ್ತೆ ಆರಂಭವಾಗಿರುವ ಎರಡನೇ ಪಾರ್ಕ್ ಇದಾಗಿದೆ. ಈ ಮುನ್ನ ಶಾಂಘೈ ಡಿಸ್ನಿಲ್ಯಾಂಡ್ ಅನ್ನು ತೆರೆಯಲಾಗಿತ್ತು. ಮಿಕ್ಕಿ ಮತ್ತು ಮಿನ್ನೀ ಗೊಂಬೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.