ಸೈಕಲ್ ಮೇಲೆ ಹತ್ತಿ ನೀರು ಕುಡಿದ ಮೂಕ ಜೀವ... ದಾಹ ನೀಗಿಸಿದ ಸೈಕ್ಲಿಸ್ಟ್! ವಿಡಿಯೋ - THIRSTY KOALA GETS DRINK FROM AUSTRALIAN CYCLIST,
ಉಷ್ಣಾಂಶ ಗಾಳಿಯಿಂದ ಬಾಯಾರಿದ ಪ್ರಾಣಿಯೊಂದಕ್ಕೆ ಸೌತ್ ಆಸ್ಟ್ರೇಲಿಯಾದ ಸೈಕ್ಲಿಸ್ಟ್ ಅನ್ನಾ ಹೊಸ್ಲರ್ ನೀರು ಕುಡಿಸಿ ಮಾನವೀಯತೆ ಮೆರೆದರು. ಅನ್ನಾ ಹೂಸ್ಲರ್ ತಮ್ಮ ಸ್ನೇಹಿತರೊಂದಿಗೆ ಅಡಿಲೇಡ್ ಹೊರವಲಯದಲ್ಲಿ ಸ್ನೇಹಿತರೊಂದಿಗೆ (27 ಡಿಸೆಂಬರ್) ಸೈಕ್ಲಿಂಗ್ಗೆ ತೆರಳಿದ್ದರು. ಈ ವೇಳೆ ಬಾಯಾರಿಕೆಯಿಂದ ಕೋಲಾ ಪ್ರಾಣಿ ನರಳುತ್ತಿದ್ದು, ಹೂಸ್ಲರ್ ಸೈಕಲ್ ಬಳಿ ಕೋಲಾ ಪ್ರಾಣಿ ಓಡಿ ಬಂದಿದೆ. ಇದನ್ನರಿತ ಹೂಸ್ಲರ್ ಕೋಲಾಗೆ ನೀರು ಕುಡಿಸಿ ಮಾನವೀಯತೆ ಮೆರೆದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೂಸ್ಲರ್ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು ಹೆಚ್ಚಾಗಿದ್ದು, ಅನೇಕ ಪ್ರಾಣಿಗಳು ನೀರಿನ ದಾಹದಿಂದ ನರಕ ಅನುಭವಿಸುತ್ತಿವೆ.