ಕರ್ನಾಟಕ

karnataka

ETV Bharat / videos

ಟ್ರಂಪ್​ ದೋಷಾರೋಪ ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ! - ಟ್ರಂಪ್​ ದೋಷಾರೋಪಣೆ ವಿಚಾರಣೆ

By

Published : Jan 17, 2020, 11:37 AM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ದೋಷಾರೋಪ ವಿಚಾರಣೆಯನ್ನು ಸೆನೆಟ್​ ಜನವರಿ 21 ರವರೆಗೆ ಮಧ್ಯಾಹ್ನ 1 ಗಂಟೆಗೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಮತ್ತು ನಂತರ ಇಡೀ ಸೆನೆಟ್ ಸಂಸ್ಥೆಯ ಪ್ರಮಾಣವಚನ ಸ್ವೀಕರಿಸಿದ ನಂತರ, ಸೆನೆಟ್ ಸಾರ್ಜೆಂಟ್ ಅಟ್ ಆರ್ಮ್ಸ್ ದೋಷಾರೋಪಣೆ ಘೋಷಣೆಯನ್ನು ಓದಿದರು. ಘೋಷಣೆಯ ನಂತರ, ಸೆನೆಟ್ ಮೆಜಾರಿಟಿ ಲೀಡರ್ ಮಿಚ್ ಮೆಕ್‌ಕಾನ್ನೆಲ್ ಅವರು ವಿಚಾರಣೆಗೆ ಸಂಬಂಧಿಸಿದ ಸರ್ವಾನುಮತದ ಒಪ್ಪಿಗೆಯ ವಿನಂತಿಗಳನ್ನು ಓದಿದರು. ನಂತರ ಸೆನೆಟ್ ​ಅನ್ನು ಜನವರಿ 21 ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಮುಂದೂಡಲಾಯಿತು.

ABOUT THE AUTHOR

...view details