ಸುಂಟರಗಾಳಿಗೆ ಸಮುದ್ರದಲೆಯಂತಾದ ಸೇತುವೆ: ರೋಮಾಂಚಕ ವಿಡಿಯೋ ನೋಡಿ - ಸುಂಟರಗಾಳಿ
ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಸಮುದ್ರದ ಮೇಲೆ ಕಟ್ಟಲಾದ ಬೃಹತ್ ಸೇತುವೆ ಗಾಳಿಗೆ ಅಲುಗಾಡುತ್ತಿದ್ದು, ತಾತ್ಕಾಲಿಕವಾಗಿ ಸೇತುವೆಯ ಮೇಲಿನ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇದು ಪ್ರಾಂತೀಯ ರಾಜಧಾನಿ ಗುವಾಂಗ್ ಹು ಮತ್ತು ಡೊಂಗ್ಗುವಾನ್ ನಗರವನ್ನು ಸಂಪರ್ಕಿಸುವ ಬೃಹತ್ ಬ್ರಿಡ್ಜ್ ಆಗಿದ್ದು ಸಮುದ್ರದಲ್ಲಿ ಉಂಟಾದ ಮಾರುತಗಳ ರಭಸಕ್ಕೆ ಸೇತುವೆ ಅಲುಗಾಡಲಾರಂಭಿಸಿದೆ. ಇದರ ಸಿಸಿಟಿವಿ ದೃಶ್ಯ ಆಧರಿಸಿ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಸೇತುವೆಗೆ ಯಾವುದೇ ಹಾನಿಯಾಗಿಲ್ಲ. ಸುಂಟರಗಾಳಿಯಿಂದಾಗಿ ಸೇತುವೆ ಅಲುಗಾಡಿದೆ ಎಂದು ತಿಳಿದು ಬಂದಿದೆ.