ಮಾನವ ಅವಶೇಷಗಳೊಂದಿಗೆ ಜಕಾರ್ತಾಗೆ ಹಿಂದಿರುಗಿದ ರಕ್ಷಣಾ ಹಡಗು - jakartha air crash
ಜಕಾರ್ತಾ (ಇಂಡೋನೇಷ್ಯಾ): ಶ್ರೀವಿಜಯ ಏರ್ ವಿಮಾನ ದುರಂತ ಸಂಬಂಧ ಇದೀಗ ಮಾನವ ಅವಶೇಷಗಳೊಂದಿಗೆ ರಕ್ಷಣಾ ಹಡಗು ಜಕಾರ್ತಾಗೆ ಹಿಂದಿರುಗಿ ಬಂದಿದೆ. ಶನಿವಾರ ಇಂಡೋನೇಷ್ಯಾದ ಜಕಾರ್ತಾದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್ ಕಡೆಗೆ ಹೊರಟಿದ್ದ 62 ಪ್ರಯಾಣಿಕರಿದ್ದ ಶ್ರೀವಿಜಯ ಏರ್ ವಿಮಾನ ಪತನಗೊಂಡು ಸಮುದ್ರಕ್ಕೆ ಅಪ್ಪಳಿಸಿತ್ತು. ನಿನ್ನೆ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು. ಇಂದು ಮಾನವ ಅವಶೇಷಗಳು ಪತ್ತೆಯಾಗಿದ್ದು, ಅವುಗಳನ್ನು ಹೊತ್ತು ರಕ್ಷಣಾ ಹಡಗು ಜಕಾರ್ತಾಗೆ ಹಿಂದಿರುಗಿದೆ.