ವೀಕ್ಷಿಸಿ: ಜಪಾನ್ ಸಮುದ್ರ ತೀರದಲ್ಲಿ ಭಾರೀ ಹಿಮಪಾತ - Record snowfall in parts of Japan
ಚಳಿಗಾಲದಿಂದಾಗಿ ಜಪಾನ್ ಸಮುದ್ರದ ತೀರದಲ್ಲಿ ಸೋಮವಾರ ಭಾರೀ ಹಿಮಪಾತವಾಗಿದೆ. ಮಧ್ಯ ಜಪಾನ್‌ನ ಫುಕುಯಿ ಪ್ರಾಂತ್ಯದಲ್ಲಿ, 100 ಕ್ಕೂ ಹೆಚ್ಚು ವಾಹನಗಳು ಹೆದ್ದಾರಿಯಲ್ಲಿ ಸಿಲುಕಿಕೊಂಡಿವೆ ಎಂದು ವರದಿಯಾಗಿದೆ. ರಕ್ಷಣಾ ಸಹಾಯಕ್ಕಾಗಿ ರಕ್ಷಣಾ ಪಡೆಗಳನ್ನು ಕೋರಲಾಗಿದೆ. ಹವಾಮಾನ ಇಲಾಖೆ ಅಧಿಕಾರಿಗಳು ಕೆಲವು ಪ್ರದೇಶಗಳು ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ಹಿಮವನ್ನು ನಿರೀಕ್ಷಿಸಬಹುದು ಎಂದು ಎಚ್ಚರಿಸಿದ್ದಾರೆ. ಕಾರುಗಳು ಸಿಲುಕಿಕೊಂಡಿದ್ದರಿಂದ ಟೊಯಾಮಾ ಪ್ರಾಂತ್ಯದಲ್ಲಿ ಸಾರಿಗೆ ಸ್ಥಗಿತಗೊಂಡಿದೆ.