ಬೆಲಾರಸ್‌ನಲ್ಲಿ ಮುಂದುವರಿದ ಪ್ರತಿಭಟನೆ: ಭುಗಿಲೆದ್ದ ಆಕ್ರೋಶ - ಬೆಲಾರಸ್‌ನಲ್ಲಿ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ವಿರುದ್ಧ ಮುಂದುವರೆದ ಪ್ರತಿಭಟನೆ
ಮಿನ್ಸ್ಕ್(ಬೆಲಾರಸ್): ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಬೆಲಾರಸ್ ಅಧ್ಯಕ್ಷಿಯ ಚುನಾವಣೆಯಲ್ಲಿ ಮತ್ತೊಮ್ಮೆ ಜಯಭಾರಿಸಿದ್ದಾರೆ. ಚುನಾವಣ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುತ್ತಿದ್ದಂತೆ ಬೆಲಾರಸ್ ನಲ್ಲಿ ಪ್ರತಿಭಟನೆ ಕಾವು ಹೊತ್ತಿಕೊಂಡಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸೋಮವಾರ ರಾತ್ರಿ ಘರ್ಷಣೆ ನಡೆದಿದೆ. ಸುದಿರ್ಘವಾಗಿ 26 ವರ್ಷಗಳ ಕಾಲ ಆಡಳಿತ ನಡೆಸಿರುವ, ಅಲೆಕ್ಸಾಂಡರ್ ಲುಕಾಶೆಂಕೊ 2025 ವರೆಗೂ ತಮ್ಮ ಅಧಿಕಾರ ಅವಧಿ ವಿಸ್ತರಿಸಿಕೊಂಡಿದ್ದಾರೆ. ಸೋಮವಾರ ಸಂಜೆ, ವಿರೋಧ ಪಕ್ಷದ ಬೆಂಬಲಿಗರ ಗುಂಪುಗಳು, ಮಿನ್ಸ್ಕ್ ಡೌನ್ಟೌನ್ನಲ್ಲಿ 'ಸ್ವಾತಂತ್ರ್ಯ!' ಮತ್ತು 'ಬೆಲಾರಸ್ ದೀರ್ಘಕಾಲ ಬದುಕಬೇಕು! ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ಹೋರ ಹಾಕಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಹಲವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.