ಮನೆ ಮೇಲೆ ಬಿದ್ದ ವಿಮಾನ... 29ಕ್ಕೂ ಹೆಚ್ಚು ಜನ ಸಾವು! ವಿಡಿಯೋ... - ಕಾಂಗೋ ವಿಮಾನ ಅಪಘಾತ
ಟೇಕಾಫ್ ಆದ ಕೊಂಚ ಸಮಯದಲ್ಲೇ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಸುಮಾರು 29ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋನ ಗೋಮ ನಗರದಲ್ಲಿ ನಡೆದಿದೆ. ವಿಮಾನದಲ್ಲಿದ್ದವರಲ್ಲಿ ಬಹುತೇಕ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ನಾರ್ತ್ ಕಿವು ಸರ್ಕಾರ ತಿಳಿಸಿದೆ. ಬಿಝಿ ಬೀ ಎಂಬ ಸ್ಥಳೀಯ ಸಂಸ್ಥೆಗೆ ಸೇರಿದ ಈ ವಿಮಾನ ಬೆನಿ ನಗರಕ್ಕೆ ಹೊರಟಿತ್ತು. ಟೇಕಾಫ್ ಆಗುವ ವೇಳೆ ಅಪಘಾತಕ್ಕೀಡಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.