ಮಾಜಿ ಮಿಡ್‌ಫೀಲ್ಡರ್ ಮೆಸುಟ್ ಓಝಿಲ್ ಫೆನರ್‌ಬಾಹ್ಸ್ ತಂಡಕ್ಕೆ ಸೇರ್ಪಡೆ - ಆರ್ಸೆನಲ್ ತಂಡ
ಇಸ್ತಾಂಬುಲ್: ಜರ್ಮನಿಯ ಮಾಜಿ ಮಿಡ್‌ಫೀಲ್ಡರ್, ಆರ್ಸೆನಲ್ ತಂಡದಿಂದ ಹೊರನಡೆದ ಮೆಸುಟ್ ಓಝಿಲ್ ಅವರು ಫೆನರ್‌ಬಾಹ್ಸ್‌ಗೆ ತೆರಳಲು ಭಾನುವಾರ ಟರ್ಕಿಗೆ ಆಗಮಿಸಿದರು. ಟರ್ಕಿಯ ಬ್ರಾಡ್‌ಕಾಸ್ಟರ್ ಬಿಬಿಒ ಸ್ಪೋರ್ಟ್ಸ್‌ನ ಟೆಲಿಫೋನ್ ಸಂದರ್ಶನದಲ್ಲಿ ಮಾತನಾಡಿದ ಅವರು, "ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಫೆನರ್‌ಬಾಹ್ಸ್ ಅಭಿಮಾನಿ ಎಂದು ಹೇಳುತ್ತೇನೆ. ಫೆನರ್‌ಬಾಹ್ಸ್ ಸಮವಸ್ತ್ರವನ್ನು ಫೆನರ್‌ಬಾಹ್ಸ್ ಅಭಿಮಾನಿಯಾಗಿ ಧರಿಸಲು ದೇವರು ನನಗೆ ಅವಕಾಶ ನೀಡಿದ್ದಾನೆ. ನಾನು ತಂಡಕ್ಕಾಗಿ ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಕಳೆದ ಮಾರ್ಚ್ ತಿಂಗಳಿಂದ ಓಝಿಲ್ ಲಂಡನ್ ತಂಡದ ಪರ ಆಡಿಲ್ಲ. ಇನ್ನು ಪ್ರೀಮಿಯರ್ ಲೀಗ್ ಮತ್ತು ಯುರೋಪ ಲೀಗ್ ಸ್ಕ್ವಾಡ್ನ್ನು ಈ ಹಿಂದೆಯೇ ಬಿಟ್ಟು ಬಂದಿದ್ದರು. ಇನ್ನು ಇದೀಗ ಫೆನರ್‌ಬಾಹ್ಸ್ ಕ್ಲಬ್ ಸೇರಿಕೊಂಡಿದ್ದಾರೆ.