Watch-ಸುಂಟರಗಾಳಿಗೆ ಅಮೆರಿಕ ಧೂಳಿಪಟ : ಏರುತ್ತಲೇ ಇದೆ ಮೃತರ ಸಂಖ್ಯೆ.. ಅಲ್ಲಿನ ಅವಸ್ಥೆ ನೋಡಿ - ಕೆಂಟುಕಿಯಲ್ಲಿ ಸುಂಟರಗಾಳಿ ಅಬ್ಬರ
ವಾಷಿಂಗ್ಟನ್ : ಅಮೆರಿಕದ ಅರ್ಕಾನ್ಸಾಸ್, ಮಿಸಿಸಿಪ್ಪಿ, ಇಲಿನಾಯ್ಸ್, ಕೆಂಟುಕಿ, ಟೆನ್ನೆಸ್ಸಿ ಮತ್ತು ಮಿಸೌರಿ - ಈ ಆರು ರಾಜ್ಯಗಳಲ್ಲಿ ಭಯಂಕರ ಸುಂಟರಗಾಳಿ ಬೀಸಿದೆ. ನೂರಾರು ಜನರು ಬಲಿಯಾಗಿದ್ದಾರೆ. ಸಾವಿನ ನಿಖರ ಮಾಹಿತಿ ದೊರೆತಿಲ್ಲ. ಆದರೆ, ಕೆಂಟುಕಿ ಒಂದರಲ್ಲೇ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ತಿಳಿದು ಬಂದಿದೆ. ಇಲಿನಾಯ್ಸ್‌ನಲ್ಲಿರುವ ಅಮೆಜಾನ್ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 6 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೃತರ ಸಂಖ್ಯೆ ಏರುತ್ತಲೇ ಇದೆ. ಸುಂಟರಗಾಳಿ ಅಬ್ಬರಕ್ಕೆ ಮನೆ-ಮಠ-ಕಟ್ಟಡಗಳು ನಾಶವಾಗಿರುವ ದೃಶ್ಯ ಇಲ್ಲಿದೆ..