ಜಪಾನ್ನಲ್ಲಿ ಭಾರಿ ಮಳೆ, ಪ್ರವಾಹ: ಜನಜೀವನ ಅಸ್ತವ್ಯಸ್ತ - ವಿಡಿಯೋ - ಜಪಾನ್ನಲ್ಲಿ ಪ್ರವಾಹ
ಟೋಕಿಯೊ: ಜಪಾನ್ನಲ್ಲಿ ಭೀಕರ ಪ್ರವಾಹ ಹಾಗೂ ಮಣ್ಣು ಕುಸಿತದಿಂದ ನೂರಾರು ಜನ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ದಕ್ಷಿಣ ಪ್ರದೇಶದಲ್ಲಿ ಸುಮಾರು 60 ಜನರು ಮೃತಪಟ್ಟಿದ್ದು, ದುರಂತದಲ್ಲಿ ಹೆಚ್ಚಿನ ಜನ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಕರ್ತರು ಶೋಧಕಾರ್ಯ ಮುಂದುವರೆಸಿದ್ದಾರೆ. ಅಪಾಯದಲ್ಲಿರುವವರ ಸ್ಥಳಾಂತರ ಕಾರ್ಯ ಕೂಡಾ ನಡೆಯುತ್ತಿದೆ.