ಆಹಾರ ಅರಸಿ ಹಂದಿ ಫಾರ್ಮ್ಗೆ ನುಗ್ಗಿದ ಪಾಂಡ... ವಿಡಿಯೋ ವೈರಲ್ - ವಿಡಿಯೋ ವೈರಲ್
ದಕ್ಷಿಣ ಚೀನಾದ ಜಿಯುಝೈಗೌ ಪ್ರದೇಶದಲ್ಲಿರುವ ಜಿನ್ಜಿಗೊ ಗ್ರಾಮದ ರೈತನ ಹಂದಿ ಫಾರ್ಮ್ಗೆ ಪಾಂಡವೊಂದು ಆಹಾರ ಅರಸಿ ಬಂದಿತ್ತು. ಪಾಂಡ ಆಹಾರಕ್ಕಾಗಿ ಹುಡುಕಾಟ ನಡೆಸಿತ್ತು. ಇದನ್ನು ಗಮನಿಸಿದ ರೈತ ತನ್ನ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾನೆ. ಪಾಂಡಗಳ ಸಂತತಿ ನಶಿಸಿಹೋಗುತ್ತಿದ್ದು, ರೈತ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದ್ದಾರೆ. ಈಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.