
ಏರ್ ಬೇಸ್ ಬಳಿ ತಾಲಿಬಾನ್ ಉಗ್ರರ ಅಟ್ಟಹಾಸ... ಬಾಂಬ್ ದಾಳಿಯಲ್ಲಿ ನಾಲ್ಕು ಅಮೆರಿಕ ಯೋಧರು ಹುತಾತ್ಮ! - undefined
ತಾಲಿಬಾನ್ ನಡೆಸಿರುವ ದಾಳಿಯಲ್ಲಿ ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆರಿಕದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಕಾಬೂಲ್ನ ಬಗ್ರಾಮ್ ಏರ್ ಬೇಸ್ ರಸ್ತೆ ಬಳಿ ತಾಲಿಬಾನ್ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ನಾಗರಿಕರ ಕಾರ್ವೊಂದು ನಜ್ಜುಗುಜ್ಜಾಗಿದೆ. ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.