ನೋ ಹಾರ್ಟ್ ಅಟ್ಯಾಕ್... ಕ್ಯಾಟ್ ವಾಕ್ ಮಾಡುತ್ತಲೇ ಪ್ರಾಣ ಬಿಟ್ಟ 26 ವರ್ಷದ ಮಾಡೆಲ್! - 26 ವರ್ಷದ ಮಾಡೆಲ್
ಬ್ರೆಜಿಲ್ನ ಸೌಪೌಲ್ನಲ್ಲಿ ಫ್ಯಾಷನ್ ವಿಕ್ ಆಯೋಜಿಸಲಾಗಿತ್ತು. 26 ವರ್ಷದ ಬ್ರೆಜಿಲ್ನ ಮಾಡೆಲ್ ಟೆಲ್ಸ್ ಸೋರೆಸ್ ಫ್ಯಾಷನ್ ವಿಕ್ನಲ್ಲಿ ಪಾಲ್ಗೊಂಡಿದ್ದ. ರ‍್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಹಿಂದಿರುಗುತ್ತಿದ್ದ ವೇಳೆ ಸಡನ್ ಆಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ವೈದ್ಯರು ಟೆಲ್ಸ್ ಸೋರೆಸ್ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ನೋಡು ನೋಡುತ್ತಲೇ ಆ ಯುವಕ ರ‍್ಯಾಂಪ್ ಮೇಲೆ ಪ್ರಾಣ ಬಿಟ್ಟಿದ್ದ.