ಗರ್ಭಪಾತಕ್ಕೆ ಮೆಕ್ಸಿಕೊ ನ್ಯಾಯಾಲಯ ನಕಾರ; ಪೊಲೀಸರೊಂದಿಗೆ ಮಹಿಳೆಯರ ಘರ್ಷಣೆ - ಗರ್ಭಪಾತಕ್ಕೆ ಮೆಕ್ಸಿಕೊ ನ್ಯಾಯಾಲಯ ನಕಾರ
ಮೆಕ್ಸಿಕೊ: ಮಹಿಳೆಯರಿಗೆ ಕಾನೂನುಬದ್ಧ ಗರ್ಭಪಾತಕ್ಕೆ ಮೆಕ್ಸಿಕೊ ಸುಪ್ರೀಂಕೋರ್ಟ್ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ, ಮಹಿಳೆಯರು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯರ ಹಕ್ಕನ್ನು ಮತ್ತೆ ನೀಡಿ ಎಂದುಆಗ್ರಹಿಸಿದ್ದು, ಕಳೆದ ಶುಕ್ರವಾರ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಕಪ್ಪು ಬಟ್ಟೆ ಹಾಗೂ ಮಾಸ್ಕ್ ಧರಿಸಿದ್ದ ಮಹಿಳೆಯರು ಬ್ಯಾನರ್‌ಗಳನ್ನು ಹಿಡಿದು ನ್ಯಾಯಾಲಯದ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.