ಕರ್ನಾಟಕ

karnataka

By

Published : Jan 13, 2020, 7:08 PM IST

ETV Bharat / videos

ಕಾಳ್ಗಿಚ್ಚಿನ ಸಂಕಷ್ಟಕ್ಕೀಡಾಗಿರುವ ಪ್ರಾಣಿಗಳಿಗೆ ಆಹಾರ ಒದಗಿಸಿದ ಸರ್ಕಾರ: ಕ್ರಮಕ್ಕೆ ಫಿದಾ ಆದ ನೆಟ್ಟಿಗರು

ಕಾಳ್ಗಿಚ್ಚಿನಿಂದ ಸಂಕಷ್ಟಕ್ಕೀಡಾಗಿರುವ ವನ್ಯಪ್ರಾಣಿಗಳ ನೆರವಿಗೆ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಕಾಳ್ಗಿಚ್ಚಿನಿಂದ ಆಹಾರದಿಂದ ಬಳಲುತ್ತಿದ್ದ ಪ್ರಾಣಿಗಳಿಗೆ ಆಸ್ಟ್ರೇಲಿಯಾ ಸರ್ಕಾರ ಟನ್‌ಗಟ್ಟಲೆ ಗೆಣಸು, ಕ್ಯಾರೆಟ್ ಹೆಲಿಕಾಪ್ಟರ್​ ಮೂಲಕ ಕಾಡಿಗೆ ಹಾಕಿದೆ. ಸರ್ಕಾರದ ಈ ಒಂದು ಕ್ರಮ ಎಲ್ಲರಲ್ಲೂ ಸಮಾಧಾನ ತಂದಿದೆ. ಪ್ರಾಣಿಗಳಿಗೆಂದೇ ಕಾಳ್ಗಿಚ್ಚು ಕಾಡಿದ ಅರಣ್ಯ ಪ್ರದೇಶದಲ್ಲಿ ಕೆಜಿಗಟ್ಟಲೆ ಕ್ಯಾರೆಟ್ ಮತ್ತು ಗೆಣಸನ್ನು ಹೆಲಿಕಾಪ್ಟರ್ ಮೂಲಕ ಹಾಕಲಾಗಿದೆ. ನ್ಯೂ ಸೌತ್ ವೇಲ್ಸ್‌ನ ಇಂಧನ ಇಲಾಖೆ ಹಾಗೂ ಪರಿಸರ ಇಲಾಖೆ ಈ ಕ್ರಮ ಕೈಗೊಂಡಿದೆ. ಈ ಕ್ರಮಕ್ಕೆ ಎಲ್ಲಾ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದ್ದು, ಈ ಫೋಟೋ ಮತ್ತು ವಿಡಿಯೋಗಳು ಈಗ ವೈರಲ್ ಆಗುತ್ತಿದೆ. ಇದುವರೆಗೆ ಸುಮಾರು 2 ಸಾವಿರ ಕೆಜಿಗೂ ಹೆಚ್ಚು ತಾಜಾ ತರಕಾರಿಗಳನ್ನು ಅರಣ್ಯ ಪ್ರದೇಶಕ್ಕೆ ಎಸೆಯಲಾಗಿದ್ದು, ಪ್ರಾಣಿಗಳು ಗಜ್ಜರಿ ಮತ್ತು ಗೆಣಸು ಸವಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ABOUT THE AUTHOR

...view details