ಪುಲ್ವಾಮಾ ಮಾದರಿ ದಾಳಿ: ವಿದ್ಯಾರ್ಥಿಗಳಿದ್ದ ಬಸ್ಗೆ ಬಾಂಬ್ ತುಂಬಿದ ಕಾರು ಡಿಕ್ಕಿ, 76 ಜನ ಸಾವು! - 76 killed in Somalia car bomb blast,
ಕಾರ್ ಬಾಂಬ್ ದಾಳಿಯಿಂದ ಸೊಮಾಲಿಯಾ ಅಕ್ಷರಶಃ ನಲುಗಿದೆ. ಮೊಗದಿಶುವಿನ ವಿವಿಧ ಕಚೇರಿ ಬಳಿಯಿದ್ದ ಚೆಕ್ ಪಾಯಿಂಟ್ ಹತ್ತಿರ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ವೇಳೆ ಸ್ಪೋಟಕ ವಸ್ತುಗಳು ತುಂಬಿದ ಕಾರ್ವೊಂದು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿದ್ದ ಬಸ್ಗೆ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ. ಪರಿಣಾಮ ಸುಮಾರು 76 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜನಜಂಗುಳಿ ಪ್ರದೇಶದಲ್ಲೇ ಕಾರ್ ಬಾಂಬ್ ಬ್ಲಾಸ್ಟ್ ಆಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಖೈದಾ ಅನುಬಂಧ ಸಂಸ್ಥೆ ಅಲ್-ಶಾಬಾದ್ ಇಸ್ಲಾಮಿಕ್ ಮಿಲಿಟೆಂಟ್ಸ್ ಈ ದಾಳಿಗೆ ಕಾರಣವಾಗಿದೆ. ದೇಶದಲ್ಲಿ ನಡೆದ ಪುಲ್ವಾಮಾ ದಾಳಿ ಮಾದರಿಯಲ್ಲೇ ಈ ಘಟನೆಯು ನಡೆದಂತೆ ಕಾಣುತ್ತಿದೆ.