ಅರ್ಜೆಂಟೀನಾದಲ್ಲಿ ಮಿಡತೆಗಳ ಹಾವಳಿ: ಜೋಳದ ಬೆಳೆ ನಾಶ: ವಿಡಿಯೋ
ಬ್ಯೂನಸ್ ಐರಿಸ್ : ಬೊಲಿವಿಯಾ, ಪರಾಗ್ವೆ ಬಳಿ ಇದೀಗ ಬ್ರೆಜಿಲ್ ಗಡಿಯಿಂದ 100 ಕಿ.ಮೀ ದೂರದಲ್ಲಿರುವ ಅರ್ಜೆಂಟೀನಾದ ಕೊರಿಯೆಂಟೆಸ್ ಪ್ರಾಂತ್ಯದಲ್ಲಿ ಮಿಡತೆಗಳ ಹಾವಳಿ ಪ್ರಾರಂಭವಾಗಿದೆ. ಮಿಡತೆಗಳ ಗುಂಪು ಜೋಳದ ಬೆಳೆಯನ್ನು ನಾಶ ಮಾಡಿದೆ. ತಾಪಮಾನ ಮತ್ತು ತೇವಾಂಶದಲ್ಲಿ ಹೆಚ್ಚಿನ ಬದಲಾವಣೆಗಳೊಂದಿಗೆ ಹವಾಮಾನ ಬದಲಾವಣೆಯು ಮಿಡತೆಗಳು ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣ ಎಂದು ಬ್ರೆಜಿಲ್ ಕೃಷಿ ಸಚಿವಾಲಯ ಹೇಳಿದೆ.