ಕಾಳ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿದೆ ಆಸ್ಟ್ರೇಲಿಯಾ... ಮುಂದುವರಿದ ರಕ್ಷಣಾ ಕಾರ್ಯಾಚರಣೆ: VIDEO - Australia forest burnt news
ಆಸ್ಟ್ರೇಲಿಯಾ (ಕ್ಯಾನ್‌ಬೆರಾ) : ಕಳೆದ ಕೆಲ ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು ಹಬ್ಬಿದ್ದು, ಅಪಾರ ಪ್ರಮಾಣದ ಕಾಡು ನಾಶವಾಗಿದೆ. ಇನ್ನೂ ಕಾಳ್ಗಿಚ್ಚು ಆರುವ ಲಕ್ಷಣಗಳು ಕಾಣಿಸುತ್ತಿಲ್ಲ. ತಾಪಮಾನದಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಚಾಚಿದೆ ಎನ್ನಲಾಗುತ್ತಿದೆ. ವಿಕ್ಟೋರಿಯಾ ರಾಜ್ಯದಲ್ಲಿ ಸುಮಾರು 320,000 ಹೆಕ್ಟೇರ್ (791,000 ಎಕರೆ) ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಈ ಬೇಸಿಗೆಯಲ್ಲಿ ಹಬ್ಬಿರುವ ಈ ಕಾಳ್ಗಿಚ್ಚು ತುಂಬಾ ವಿನಾಶಕಾರಿಯಾಗಿದ್ದು, ಈಗಾಗಲೇ ಸುಮಾರು 5 ಮಿಲಿಯನ್ ಹೆಕ್ಟೇರ್ (12.35 ಮಿಲಿಯನ್ ಎಕರೆ) ಭೂಮಿಯನ್ನು ಸುಟ್ಟುಹಾಕಿದೆ. ಪ್ರಾಣಿ ಪಕ್ಷಿಗಳು ಮತ್ತು 1,500 ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ. ಜನ ಸಂದಣಿ ಹೆಚ್ಚಿರುವ ನ್ಯೂ ಸೌತ್ ವೇಲ್ಸ್, ಕ್ಯಾನ್‌ಬೆರಾ, ಸಿಡ್ನಿ ಸೇರಿ ಅನೇಕ ಪ್ರದೇಶಗಳಿಗೆ ಕಾಡಿನ ಬೆಂಕಿ ಆವರಿಸುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
Last Updated : Jan 6, 2020, 2:20 PM IST