ಟ್ರಕ್-ಮಿನಿ ಬಸ್ ನಡುವೆ ಅಪಘಾತ: 12 ಜನರ ದುರ್ಮರಣ - ರಷ್ಯಾದಲ್ಲಿ ಟ್ರಕ್-ಬಸ್ ನಡುವೆ ಅಪಘಾತ
ಮಾಸ್ಕೋ: ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಸೆಂಟ್ರಲ್ ರಷ್ಯಾದಲ್ಲಿ ನಡೆದಿದೆ. ಟ್ರಕ್ ಸ್ಕಿಡ್ ಆಗಿರುವ ಪರಿಣಾಮ ಮುಂಬರುತ್ತಿದ್ದ ಮಿನಿ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಸಂಸ್ಥೆ ತಿಳಿಸಿದೆ.