ತ್ರಿಶೂರ್ ಎಸ್ಟೇಟ್‌ನಲ್ಲಿ ಬೀಡುಬಿಟ್ಟಿವೆ 40ಕ್ಕೂ ಹೆಚ್ಚು ಆನೆಗಳು: ಸ್ಥಳೀಯರಿಗೆ ಪ್ರಾಣಭಯ - over 40 wild elephants have been camping in a rubber estate in a village in this central Kerala district
ತ್ರಿಶೂರ್(ಕೇರಳ): ಕಳೆದ ಕೆಲ ದಿನಗಳಿಂದ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ತ್ರಿಶೂರ್ ಜಿಲ್ಲೆಯ ಪಾಲಪ್ಪಿಲ್ಲಿ ಎಂಬಲ್ಲಿನ ಎಸ್ಟೇಟ್‌ನಲ್ಲಿ ಸುತ್ತಾಡುತ್ತಿದ್ದು, ಹಲವು ರಬ್ಬರ್ ಮರಗಳನ್ನು ಉರುಳಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆನೆಗಳ ಹಿಂಡನ್ನು ಅರಣ್ಯಕ್ಕೆ ಓಡಿಸಲು ಪಟಾಕಿಗಳನ್ನು ಸಿಡಿಸಲಾಯಿತಾದರೂ ಅವು ಅಲ್ಲಿಂದ ಕದಲುತ್ತಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ನಡೆದು ಕೆಲಸಕ್ಕೆ ಬರುವವರು ಗುಂಪಾಗಿ ಬನ್ನಿ, ಇಲ್ಲವಾದರೆ ಆನೆಗಳು ದಾಳಿ ಮಾಡುವ ಸಂಭವವಿದೆ ಎಂದು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Last Updated : Feb 3, 2023, 8:20 PM IST