ಕನಕಗಿರಿ ಕನಕಾಚಲ ಲಕ್ಷ್ಮಿ ನರಸಿಂಹ ದೇವರ ಅದ್ಧೂರಿ ಗರುಡೋತ್ಸವ - ಕನಕಗಿರಿ ಕನಕಾಚಲ ಲಕ್ಷ್ಮೀ ನರಸಿಂಹ ಜಾತ್ರೆ
ಕೊಪ್ಪಳ: ಜಿಲ್ಲೆಯ ಐತಿಹಾಸಿಕ ಕನಕಗಿರಿಯ ಶ್ರೀ ಕನಕಾಚಲ ಲಕ್ಷ್ಮಿ ನರಸಿಂಹ ಜಾತ್ರೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅದ್ಧೂರಿ ಗರುಡೋತ್ಸವ ನಡೆಯಿತು. ಹತ್ತಾರು ಸಾವಿರ ಭಕ್ತರು ಗರುಡೋತ್ಸವದಲ್ಲಿ ಭಾಗವಹಿಸಿದ್ದರು. ಜಾತ್ರೆ ಮಾರ್ಚ್ 15ರಿಂದ ಆರಂಭವಾಗಿದ್ದು, ಮಾ. 24ರಂದು ಮಹಾರಥೋತ್ಸವ ನಡೆಯಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಹನುಮೋತ್ಸವ, ಗರುಡೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಕೊರೊನಾ ಸೋಂಕಿನ ಭೀತಿಯಿಂದ ಕಳೆದ ಎರಡು ವರ್ಷ ಕಳೆಗುಂದಿದ್ದ ಕನಕಗಿರಿಯ ಜಾತ್ರಾ ವೈಭವ ಈ ವರ್ಷ ಕಳೆಗಟ್ಟಿದೆ.
Last Updated : Feb 3, 2023, 8:20 PM IST