ಇದೇ 24ಕ್ಕೆ ತೆರೆ ಮೇಲೆ 'ಗಡಿನಾಡು'..... ಮರಾಠಿ ಹುಡುಗಿ-ಕನ್ನಡ ಹುಡುಗನ ಪ್ರೇಮಕಥೆ! - Vasant Murari Dallavi of Belgaum
ಬೆಳಗಾವಿಯಲ್ಲಿ ಮರಾಠಿ ಮತ್ತು ಕನ್ನಡಿಗರ ಗಡಿ ವಿವಾದವನ್ನಿಟ್ಟುಕೊಂಡಂತೆ ಹೊಸ ಸಿನಿಮಾವೊಂದು ಇದೇ ಜನವರಿ 24ಕ್ಕೆ ತೆರೆ ಮೇಲೆ ಬರೋಕೆ ಸಿದ್ದವಾಗಿದೆ. ಈ ಹಿಂದೆ ಗುಣ ಎಂಬ ಸಿನಿಮಾ ನಿರ್ದೇಶಿಸಿದ್ದ ನಾಗ್ ಹುಣಸೋಡ್, ಇದೀಗ ಬೆಳಗಾವಿ ಗಡಿ ವಿವಾದವನ್ನಿಟ್ಟುಕೊಂಡು ಗಡಿನಾಡು ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಗಡಿ ವಿವಾದದ ಜೊತೆಗೆ ಮರಾಠಿ ಹುಡುಗಿ ಮತ್ತು ಕನ್ನಡ ಹುಡುಗನ ಪ್ರೇಮ ಕಥೆಯನ್ನ ಇಲ್ಲಿ ಹೆಣೆಯಲಾಗಿದೆ. ಪ್ರಭುಸೂರ್ಯ ನಾಯಕ ನಟನಾಗಿದ್ದು, ಸಂಚಿತಾ ಪಡುಕೋಣೆ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಬೆಳಗಾವಿಯ ವಸಂತ್ ಮುರಾರಿ ದಳವಾಯಿ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.