ಭತ್ತದ ಗದ್ದೆಗೆ ನುಗ್ಗಿದ ಕಾಡೆಮ್ಮ ಹಿಂಡು ಬೆಳೆ ನಾಶ - ಈಟಿವಿ ಭಾರತ ಕರ್ನಾಟಕ
ಶಿವಮೊಗ್ಗ: ಭತ್ತದ ಗದ್ದೆಗೆ ನುಗ್ಗಿ ಕಾಡೆಮ್ಮೆಗಳ ಹಿಂಡು ಬೆಳೆ ಹಾನಿ ಮಾಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ತಿರಳೇ ಬೈಲು ಗ್ರಾಮದಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರಳೇ ಬೈಲು ಗ್ರಾಮದ ರಸ್ತೆ ಅಕ್ಕ ಪಕ್ಕದ ಭತ್ತದ ಜಮೀನಿಗೆ ಕಾಡೆಮ್ಮೆಗಳು ನುಗ್ಗಿ ಭತ್ತದ ಪೈರು ತಿಂದು, ತುಳಿದು ನಾಶ ಮಾಡಿವೆ. ಸುಮಾರು 15 ಕ್ಕೂ ಹೆಚ್ಚಿನ ಕಾಡೆಮ್ಮೆಗಳು ಭತ್ತದ ಗದ್ದೆಗೆ ನುಗ್ಗಿದ್ದು, ಇದರಿಂದ ಭತ್ತದ ಗದ್ದೆ ಸಂಪೂರ್ಣವಾಗಿ ಹಾಳಾಗಿದೆ. ಇನ್ನು ಕಾಡೆಮ್ಮೆ ಹಿಂಡುಗಳನ್ನು ಓಡಿಸುವ ಧೈರ್ಯ ಯಾರೂ ಮಾಡಲ್ಲ. ಕಾರಣ ಕಾಡೆಮ್ಮೆಗಳು ಏಕಾಏಕಿ ಮನುಷ್ಯರ ಮೇಲೆ ದಾಳಿ ನಡೆಸುತ್ತವೆ. ಇದರಿಂದ ರೈತರು ಕಾಡೆಮ್ಮೆಗಳನ್ನು ಬೆದರಿಸುವುದಕ್ಕೆ ಹೋಗುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
Last Updated : Feb 3, 2023, 8:33 PM IST