ವಿಡಿಯೋ: ಡ್ರೈ ಪ್ರೂಟ್ಸ್ ಮೋದಕ... ಗಣೇಶ ಹಬ್ಬಕ್ಕೆ ಹೊಸ ಬಗೆಯ ನೈವೇದ್ಯ - ಮೋದಕ ಮಾಡುವ ವಿಧಾನ
ನಮ್ಮಲ್ಲಿ ಹಬ್ಬ ಅಂದ್ರೆ ಅದಕ್ಕೆ ಸಿಹಿ ಪದಾರ್ಥಗಳು ಇರಲೇಬೇಕು. ಹಬ್ಬ ಅಂದ್ರೆನೇ ಸಿಹಿ ಅನ್ನೋ ಥರ ವಿವಿಧ ಬಗೆಯ ಸಿಹಿ ಖಾದ್ಯಗಳನ್ನು ತಯಾರಿಸಿ ಹಬ್ಬ ಆಚರಿಸೋದು ನಮ್ಮಲ್ಲಿ ಕಾಮನ್. ಬಗೆ ಬಗೆಯ ಸಿಹಿ ತಿಂಡಿ ತಯಾರಿಸಿ ಹಬ್ಬದಂದು ದೇವರಿಗೆ ನೈವೇದ್ಯ ಇಡುತ್ತೇವೆ. ಎಷ್ಟೇ ವೆರೈಟಿಯ ಸಿಹಿ ತಯಾರಿಸಿದ್ರೂ, ಇನ್ನಷ್ಟು ಹೊಸ ಬಗೆಯ ಸಿಹಿ ತಯಾರಿಸಬೇಕು ಅನ್ನೋದು ಸಾಮಾನ್ಯವಾಗಿ ಎಲ್ಲರ ಆಸೆ. ಅದರಲ್ಲೂ ಸರಳವಾಗಿ ಸಿಹಿ ತಯಾರಿಸುವ ಹಾಗಿದ್ದರೆ, ಹಬ್ಬದ ಸಂಭ್ರಮ ಇನ್ನಷ್ಟು ಚೆಂದ. ಇದಕ್ಕಾಗಿ ಈ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನಿಗೆ ಪ್ರಿಯವಾದ ಮೋದಕವನ್ನು ಮಾಡಲೇಬೇಕು. ಇಂದು ಡ್ರೈ ಫ್ರುಟ್ಗಳಿಂದ ಮಾಡುವ ಮೋದಕದ ಸರಳ ವಿಧಾನವನ್ನು ನಾವು ತೋರಿಸುತ್ತೇವೆ ನೋಡಿ. ಇದನ್ನು ನೀವೂ ಮನೆಯಲ್ಲಿ ಮಾಡಿ ಹಬ್ಬವನ್ನು ಇನ್ನಷ್ಟು ಎಂಜಾಯ್ ಮಾಡಿ..