ನಿಷೇಧಿತ ತೆಹ್ರಿ ಅಣೆಕಟ್ಟಿನ ವ್ಯೂವ್ ಪಾಯಿಂಟ್ಗೆ ತೆರಳಿ ಚಿತ್ರೀಕರಣ ಮಾಡಿದ ಅಪರಿಚಿತರು! ವಿಡಿಯೋ! - ಚಿತ್ರೀಕರಣ ಮಾಡಿದ ಅಪರಿಚಿತರು
ತೆಹ್ರಿ(ಉತ್ತರಾಖಂಡ): ತೆಹ್ರಿ ಅಣೆಕಟ್ಟೆಯ ಬಳಿ ತೆರಳಲು ಜನರಿಗೆ ನಿಷೇಧ ಹೇರಲಾಗಿದ್ದು, ಅಲ್ಲದೇ ಫೋಟೋ ತೆಗೆಯುವುದು ಮತ್ತು ವಿಡಿಯೋ ಚಿತ್ರಿಕರಿಸುವುದನ್ನೂ ನಿಷೇಧಿಸಲಾಗಿದೆ. ಆದರೇ ಇಬ್ಬರು ಅಪರಿಚಿತ ವ್ಯಕ್ತಿಗಳು ಶುಕ್ರವಾರ ಅಣೆಕಟ್ಟೆಯ ವ್ಯೂವ್ ಪಾಯಿಂಟ್ಗೆ ತೆರಳಿ ಅನುಮಾನಾಸ್ಪದ ರೀತಿಯಲ್ಲಿ ಮೊಬೈಲ್ನಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ. ಅಲ್ಲದೇ ತೆಗೆದಿರುವ ಫೋಟೋ ಮತ್ತು ವಿಡಿಯೋಗಳನ್ನು ವಾಟ್ಸ್ಆ್ಯಪ್ ಮೂಲಕ ಬೇರೊಬ್ಬರ ಜೊತೆ ಹಂಚಿಕೊಂಡಿದ್ದಾರೆ. ಯಾರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂಬ ಅನುಮಾನಗಳು ಕಾಡತೊಡಗಿದ್ದು, ಅಲ್ಲಿಯ ಅಧಿಕಾರಿಗಳ ವಿರುದ್ಧ ಭದ್ರತ ಲೋಪ ಆರೋಪಗಳು ಕೇಳಿ ಬಂದಿವೆ. ಇನ್ನು ಪೊಲೀಸರು ಅಪರಿಚಿತರಿಗಾಗಿ ಹುಡುಕಾಟ ನಡೆಸಿದ್ದಾರೆ.
Last Updated : Feb 3, 2023, 8:33 PM IST