ಬೆಂಗಾಲಿ ನಿರ್ದೇಶಕರ ಕರೆಗಾಗಿ ಕಾಯುತ್ತಿರುವ ಬ್ರಹ್ಮಾಸ್ತ್ರದ ಖಳನಾಯಕಿ ಮೌನಿ.. - ಈಟಿವಿ ಭಾರತ ಕನ್ನಡ
ಕೋಲ್ಕತ್ತಾ: ಬ್ರಹ್ಮಾಸ್ತ್ರದ ಖಳನಾಯಕಿ ಮೌನಿ ರಾಯ್ ಅವರು ಇಂದು ಪ್ರತಿಷ್ಠಿತ ಬಟ್ಟೆ ಔಟ್ಲೆಟ್ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ, ಕಪ್ಪು ಉಡುಗೆಯಲ್ಲಿ ಗಮನ ಸೆಳೆದರು. ಈ ವೇಳೆ, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ರಾಯ್ ತಮಗೆ ಇಷ್ಟವಾದ ಆಹಾರದ ಬಗ್ಗೆ ತಿಳಿಸಿದರು. ಬಳಿಕ ಬೆಂಗಾಲಿ ಚಿತ್ರದಲ್ಲಿ ಪ್ರೇಕ್ಷಕರು ನಿಮ್ಮನ್ನು ನೋಡುವುದು ಯಾವಾಗ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮೌನಿ, ನಿರ್ದೇಶಕರು ಕರೆಯುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿ ತಮ್ಮ ಮುಂಬರುವ ಚಿತ್ರದ ಬಗ್ಗೆ ಅಪ್ಡೇಟ್ಸ್ ನೀಡಿದರು.
Last Updated : Feb 3, 2023, 8:31 PM IST