ಅರೆಬೆತ್ತಲೆಯಾಗಿ ಹೈವೋಲ್ಟ್ ವಿದ್ಯುತ್ ತಂತಿ ಮೇಲೆ ಸ್ಟಂಟ್ ಮಾಡಿದ ಯುವಕ: ವಿಡಿಯೋ ವೈರಲ್ - ಈಟಿವಿ ಭಾರತ ಕನ್ನಡ
ದಾಮೋಹ್(ಮಧ್ಯಪ್ರದೇಶ): ಜಿಲ್ಲೆಯ ಶಹಜಾದ್ಪುರ ಗ್ರಾಮದಲ್ಲಿ ವಿಕಲಚೇತನ ಯುವಕನೊಬ್ಬ ಹೈವೋಲ್ಟೇಜ್ ವಿದ್ಯುತ್ ತಂತಿಗಳ ಮೇಲೆ ಸ್ಟಂಟ್ ಮಾಡಿದ್ದ ಘಟನೆ ನಡೆದಿದೆ. ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಅರೆಬೆತ್ತಲೆಯಾಗಿ ಹೈವೋಲ್ಟೇಜ್ ವಿದ್ಯುತ್ ತಂತಿಯ ಮೇಲೆ ಸ್ಟಂಟ್ ಮಾಡಿದ್ದಾನೆ. ಅದೃಷ್ಟವಶಾತ್ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಹಿನ್ನೆಲೆ ಯುವಕನಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಇನ್ನು ಇದನ್ನು ಕಂಡ ಗ್ರಾಮಸ್ಥರು ಯುವಕನನ್ನ ಕೆಳಗಿಳಿಸಲು ಪ್ರಯತ್ನ ಮಾಡಿದರೂ ಯುವಕ ಕೆಳಗೆ ಬಾರದೇ ಇರುವ ಹಿನ್ನೆಲೆ ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ ವಿಷಯವನ್ನ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಕೆಳಗಿಳಿಸಿದ್ದಾರೆ.
Last Updated : Feb 3, 2023, 8:29 PM IST