ಕರ್ನಾಟಕ

karnataka

ಗುಲಾಬ್​ ಜಾಮೂನ್ ಮಾಡುವ ವಿಧಾನ

ETV Bharat / videos

ಹೋಳಿ ಸಂಭ್ರಮಕ್ಕೆ ಸಿಹಿತಿನಿಸು: ಬಾಯಲ್ಲಿ ನೀರೂರಿಸುವ ಗುಲಾಬ್​ ಜಾಮೂನ್ ಮಾಡುವ ವಿಧಾನ - how to make gulab jamun

By

Published : Mar 5, 2023, 4:57 PM IST

ಭಾರತದ ಪ್ರಸಿದ್ಧ ಸಿಹಿ ತಿನಿಸುಗಳ ಪೈಕಿ ಖೋವಾ ಗುಲಾಬ್​ ಜಾಮೂನ್ ಅಗ್ರ ಸ್ಥಾನದಲ್ಲಿದೆ. ಗುಲಾಬ್​ ಜಾಮೂನ್ ಎಂದಾಕ್ಷಣ ಬಹುತೇಕರ ಬಾಯಲ್ಲಿ ನೀರೂರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರೂ ಸಹ ಈ ತಿನಿಸನ್ನು ಸವಿಯಲು ಬಯಸುತ್ತಾರೆ. ಬಣ್ಣದ ಹಬ್ಬ ಹೋಳಿ ಸಂಭ್ರಮಕ್ಕೆ ಎರಡು ದಿನಗಳು ಬಾಕಿ ಇದ್ದು, ಬಣ್ಣಗಳ ಸಂಗ್ರಹ ಜೊತೆಗೆ ಸಿಹಿ ತಿಂಡಿಯವರೆಗೆ ಎಲ್ಲಾ ತಯಾರಿ ಆರಂಭಗೊಂಡಿದೆ. ಬಾಯಲ್ಲಿ ನೀರೂರಿಸುವ ಗುಲಾಬ್ ಜಾಮೂನ್​ ತಯಾರಿಕೆಗೆ​ ಏನೆಲ್ಲಾ ಅಗತ್ಯವಿದೆ, ಮಾಡುವ ವಿಧಾನ ಹೇಗೆಂದು ತಿಳಿದುಕೊಳ್ಳಿ.

ಗುಲಾಬ್​ ಜಾಮೂನ್ ಮಾಡುವ ವಿಧಾನ: ಖೋವಾ 1 ಕಪ್, ಸಣ್ಣ ರವೆ 2 ಸ್ಪೂನ್, ಮೈದಾ 3 ಸ್ಪೂನ್, ಬೇಕಿಂಗ್​ ಪೌಡರ್​ 1/4 ಸ್ಪೂನ್,  ಏಲಕ್ಕಿ ಪುಡಿ 1 ಸ್ಪೂನ್ - ಇವೆಲ್ಲವನ್ನೂ ಬರೆಸಿ ಮೃದುವಾದ ಹಿಟ್ಟು ತಯಾರಿಸಿ. ಬಳಿಕ ಹಾಲು 2 ಸ್ಪೂನ್ ಬೆರೆಸಿ ಮೃದು ಹಿಟ್ಟು ತಯಾರಿಸಿ. ನಂತರ ಸಕ್ಕರೆ ಪಾಕ ಮಾಡಿಕೊಳ್ಳಿ. ಸಕ್ಕರೆ ನಿಮ್ಮ ರುಚಿಗೆ ತಕ್ಕಷ್ಟು (1/4 ಕಪ್), ನೀರು 1 ಕಪ್, ಸಕ್ಕರೆ ಕರಗುವವರೆಗೂ ನೀರನ್ನು ಕುದಿಸಿ ಇಟ್ಟುಕೊಳ್ಳಿ. ಕಲಸಿಟ್ಟ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಉಂಡೆಯೊಳಗೆ ಪಿಸ್ತಾ, ಗೋಡಂಬಿ ಇಡಬಹುದು. ಬಳಿಕ ಈ ಉಂಡೆಯನ್ನು ಎಣ್ಣೆಯಲ್ಲಿ ಕಾಯಿಸಿ. ಕಂದು ಬಣ್ಣ ಬಂದ ಈ ಉಂಡೆಗಳನ್ನು ಸಕ್ಕರೆ ಪಾಕಕ್ಕೆ ಹಾಕಿ. ಪರಿಮಳಕ್ಕಾಗಿ ಸಕ್ಕರೆ ಪಾಕಕ್ಕೆ ಸ್ವಲ್ಪ ರೋಸ್ ವಾಟರ್ ಬೆರೆಸಿದರೆ ರುಚಿ ರುಚಿಯಾದ ಗುಲಾಬ್​ ಜಾಮೂನ್ ರೆಡಿ.. ಟೇಸ್ಟ್ ಮಾಡಿ ಆನಂದಿಸಿ.

ಇದನ್ನೂ ಓದಿ:ಬಗೆ ಬಗೆ ಸಿಹಿ ತಿಂಡಿಗಳೊಂದಿಗೆ ನೀವೂ ವರ್ಣರಂಜಿತ ಹೋಳಿ ಹಬ್ಬ ಆಚರಿಸಿ!

ಮೃದುವಾದ ಹಾಗೂ ರಸವತ್ತಾದ ಗುಲಾಬ್​ ಜಾಮೂನ್​ ಮಾಡುವ ವಿಧಾನವನ್ನು ನಿಮಗೆ ತೋರಿಸಿದ್ದೇವೆ. ಮನೆಯಲ್ಲಿ ಈ ಜಾಮೂನ್ ತಯಾರಿಸಿ ನಿಮ್ಮ ಪ್ರೀತಿ ಪಾತ್ರರಿಗೂ ಹಂಚಿರಿ. 

ABOUT THE AUTHOR

...view details