ದಿನವಿಡೀ ಕೆಲಸ ಮಾಡಿ ದಣಿದಿದ್ದೀರಾ..? ನಿಮಗಾಗಿ ಇಲ್ಲಿದೆ ಆರೆಂಜ್ & ಲೈಮ್ ಐಸ್ಡ್ ಟೀ - ಚಹಾ
ಚಹಾ ಕೇವಲ ಪಾನೀಯವಲ್ಲ. ಶತಮಾನಗಳಿಂದ ಇದು ಆನಂದದಾಯಕ ಅಮೃತವಾಗಿ ಮಾರ್ಪಟ್ಟಿದೆ. ಕೆಲವರಂತೂ ಯಾವುದರಲ್ಲಾದರೂ ರಾಜಿ ಮಾಡಿಕೊಳ್ಳುತ್ತಾರೆ, ಆದರೆ ಬೆಳಗಿನ ಜಾವ ಚಹಾ ಕುಡಿಯುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ನಿಮ್ಮ ನೆಚ್ಚಿನ ಚಹಾಗೆ ಕಿತ್ತಳೆ ಹಣ್ಣು ಮತ್ತು ನಿಂಬೆ ಹಣ್ಣಿನ ರಸ ಬೆರಸಿ, ಅದ್ಭುತ ಮಿಶ್ರಣವನ್ನು ಸವಿಯಬಹುದಾಗಿದೆ. ಇವುಗಳಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ದೇಹದ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ದೇಹದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ. ಆರೆಂಜ್ & ಲೈಮ್ ಐಸ್ಡ್ ಟೀ ಮಾಡುವ ಸುಲಭ ವಿಧಾನವನ್ನು ನಾವು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ.